image_pdfimage_print
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯ ಕರ್ನಾಟಕ ಕ್ಷೇತ್ರಗಳಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಲಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಹಿನ್ನಡೆಯಾಗಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ಹೇಳಿದೆ. ಕಳೆದ ಬಾರಿ 19 ಸ್ಥಾನಗಳಿಸಿದ್ದ ಬಿಜೆಪಿ ಈ ಬಾರಿ 1 ಸ್ಥಾನ ಹೆಚ್ಚಿಗೆ ಪಡೆಯಲಿದ್ದು, 3 ಸ್ಥಾನ ಪಡೆದಿದ್ದ ಜೆಡಿಎಸ್ 1 ಸ್ಥಾನ ಕಳೆದುಕೊಳ್ಳಲಿದೆ. ಆದರೆ ಕಾಂಗ್ರೆಸ್ ಕಳೆದ ಬಾರಿಯಷ್ಟೇ ಅಂದರೆ 6 ಸ್ಥಾನಗಳನ್ನು ಉಳಿಸಿಕೊಳ್ಳಲಿದೆ.  ಮತಗಳಿಕೆ ಪ್ರಮಾಣದಲ್ಲೂ ಬಿಜೆಪಿಗೆ ಲಾಭವಾಗಿದ್ದು, ಶೇ. 44ರಷ್ಟು ಮತಗಳಿಸುವ ಮೂಲಕ ಪ್ಲಸ್ 2 ರಷ್ಟು ಮತಗಳನ್ನು ಹೆಚ್ಚಿಸಿಕೊಳ್ಳಲಿದೆ. ಕಾಂಗ್ರೆಸ್‌ಗೆ ಮತಗಳಿಕೆಯಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆಯಾಗುವುದಿಲ್ಲ. ಅದು ಶೇ. 38ರಷ್ಟು ಮತ ಪಡೆಯಲಿದೆ. ಇನ್ನು ಜೆಡಿಎಸ್ ಶೇ. 11 ರಷ್ಟು ಮತ ಪಡೆಯುವುದರ ಮೂಲಕ ಕಳೆದ ಬಾರಿಗಿಂತ ಶೇ. 3ರಷ್ಟು ಓಟುಗಳನ್ನು ಕಳೆದುಕೊಳ್ಳಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ತಿಳಿಸಿದೆ. ಬಿಜೆಪಿಗೆ ಹೆಚ್ಚು ಸ್ಥಾನ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮರಳಿರುವುದು ಪ್ರಮುಖ ಕಾರಣ. ಒಂದೊಮ್ಮೆ ಅವರು ವಾಪಸ್ ಬರದಿದ್ದರೆ ಇದರ ಚಿತ್ರಣವೇ ಬದಲಾಗುತ್ತಿತ್ತು ಎಂದೂ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಸ್ಥಾನಗಳು
1. ಬಿಜೆಪಿ 20
2.ಕಾಂಗ್ರೆಸ್ 06
3.ಜೆಡಿಎಸ್ 02

BJP_KAR

ಕೃಪೆ:-   ಬಿಜೆಪಿಗೆ ಪ್ಲಸ್, ಜೆಡಿಎಸ್‌ಗೆ ಮೈನಸ್, ‘ಕೈ’ಗಿಲ್ಲ ಲಾಸ್!