maxresdefault
‘ಪ್ರಾಮಾಣಿಕತೆ, ಚಾರಿತ್ರ್ಯ, ಬದ್ಧತೆ, ವಿಶ್ವಾಸ, ಪ್ರೀತಿ ಮತ್ತು ವಿಧೇಯತೆಗಳೇ ಸಮತೋಲನದ ಯಶಸ್ಸಿನ ಬುನಾದಿ.’
 

ಶ್ರೀ ಅನಂತಕುಮಾರ್ ಅವರು ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಗಳು ಮಾತ್ರವಲ್ಲ, 15ನೇ ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 10ನೇ ಲೋಕಸಭೆಯಿಂದ ಆರಂಭಿಸಿ ಇಲ್ಲಿನ ತನಕದ ಅವರ ಯಶಸ್ಸಿನ ಗುಟ್ಟು ಎಂದರೆ ಆವರು ಕಾಪಾಡಿಕೊಂಡು ಬಂದಿರುವ ಪ್ರಾಮಾಣಿಕತೆ, ಚಾರಿತ್ರ್ಯತೆ, ಬದ್ಧತೆ, ವಿಶ್ವಾಸ, ಪ್ರೀತಿ, ಮತ್ತು ವಿಧೇಯತೆಗಳೇ ಆಗಿವೆ..

ಮಧ್ಯಮ ವರ್ಗದ ಕುಟುಂಬದಲ್ಲಿ 22ನೆ ಜುಲೈ 1959 ರಲ್ಲಿ ಜನಿಸಿದ ಶ್ರೀ ಅನಂತಕುಮಾರರ ತಂದೆಯವರ ಹೆಸರು ಶ್ರೀ ನಾರಾಯಣ ಶಾಸ್ತ್ರಿ ಮತ್ತು ತಾಯಿಯವರು ಶ್ರೀಮತಿ ಗಿರಿಜ ಎನ್ ಶಾಸ್ತ್ರಿ. ಶ್ರೀ ಅನಂತಕುಮಾರರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಹುಬ್ಬಳ್ಳಿಯ ಕೆ ಎಸ್ ಆರ್ಟ್ಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಧವೀಧರರಾಗಿ (B.A), ನಂತರ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ ಜೆ.ಎಸ್.ಎಸ್. ಲಾ ಕಾಲೇಜಿನಲ್ಲಿ ಕಾನೂನು ಪದವೀಧರರಾದರು. ರಾಷ್ಟ್ರೀಯತೆಯ ನಂಬಿಕೆಯಿಂದ ಆಕರ್ಷಿತರಾಗಿ ಮತ್ತು ತಾಯ್ನಾಡಿನ ಪ್ರೇಮದಿಂದ ಸಾಮಾಜಿಕ ಜೀವನಕ್ಕೆ ಕಾಲಿಟ್ಟು ಜನಸೇವೆಯನ್ನು ಮಾಡಲು ಹಂಬಲಿಸುತ್ತಿದ್ದಾಗ ಅವರು ಅದನ್ನು ನನಸಾಗಿಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ್ನು ಆರಿಸಿಕೊಂಡರು. ಎಬಿವಿಪಿ ಯಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಅವರು ಮುಂದೆ ಕರ್ನಾಟಕದ ಅತ್ಯಂತ ಪ್ರಭಾವೀ ವಿದ್ಯಾರ್ಥಿ ನಾಯಕರೂ ಆಗಿದ್ದರು.

ಆಗಿನ ಇಂದಿರಾ ಗಾಂಧಿಯವರ ಸರ್ಕಾರ ಭಾರತದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರ ವಿರುದ್ಧ ಹೋರಾಡಿದ ಶ್ರೀ ಅನಂತಕುಮಾರರು ಜೈಲುವಾಸವನ್ನೂ ಅನುಭವಿಸಬೇಕಾಯಿತು. ಇದು ಮಾರ್ಕ್ ಟ್ವೈನಿನ ನುಡಿಗಳಲ್ಲಿ ಒಂದನ್ನು ನೆನಪಿಗೆ ತರುತ್ತದೆ. ‘Loyalty to the country always. Loyalty to the Government when it deserves it. ಅಂದರೆ ದೇಶಕ್ಕೆ ಯಾವಾಗಲೂ ನಿಷ್ಠೆಯಿಂದಿರು, ಸರ್ಕಾರಕ್ಕೆ ಅವಶ್ಯವಿದ್ದಾಗ ಮಾತ್ರ ನಿಷ್ಠೆಯಿಂದಿರು'

ತಮ್ಮ ಸಂಘಟನಾ ಕೌಶಲ್ಯವನ್ನು ಯಶಸ್ವೀಯಾಗಿ ನಿರ್ವಹಿಸಿದ ಶ್ರೀ ಅನಂತಕುಮಾರರು ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ ಮತ್ತು 1985ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. 1987ರಲ್ಲಿ ರಾಜಕಾರಣದ ಉನ್ನತ ಹಂತಕ್ಕೇರಲು ನಿರ್ಧರಿಸಿ ಭಾರತೀಯ ಜನತಾ ಪಾರ್ಟಿಯನ್ನು ಸೇರಿದರು. ಕರ್ನಾಟಕದ ಭಾರತೀಯ ಜನತಾ ಯುವ ಮೋರ್ಚದ ಅಧ್ಯಕ್ಷರಾಗಿ ಅವರದ್ದು ಮೊದಲ ಜವಾಬ್ದಾರಿಯಾಗಿತ್ತು. 1995 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡರು. 1996 ರಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿಯೂ ಆಯ್ಕೆಯಾದರು. ಆ ಸಂದರ್ಭದಲ್ಲಿ ರೈಲ್ವೆ ಮತ್ತು ಕೈಗಾರಿಕೆ ಸಚಿವಾಲಯಗಳ ವಿವಿಧ ಸಮಿತಿಗಳ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು. 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಸಂಪುಟದಲ್ಲಿ ವಿಮಾನಯಾನ ಖಾತೆಯ ಸಚಿವರಾಗಿ ಈಗಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ರಾಜ್ಯ ಸರಕಾರದೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಈ ಒಡಂಬಡಿಕೆಯ ಕಾರಣದಿಂದಾಗಿಯೇ ವಿಮಾನ ನಿಲ್ದಾಣದ ಯೋಜನೆ ಅಸ್ತಿತ್ವಕ್ಕೆ ಬಂದಿತು. 1999 ರಲ್ಲಿ ಎನ್ ಡಿ ಎ ಸರಕಾರದ ಸಚಿವ ಸಂಪುಟದಲ್ಲಿ ಅತ್ಯಂತ ಪ್ರಮುಖ ಖಾತೆಗಳಾದ, ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವಜನ ವ್ಯವಹಾರಗಳು, ಸಂಸ್ಕೃತಿ ಮತ್ತು ನಗರಾಭಿವೃದ್ಧಿ ಹಾಗೂ ಬಡತನ ನಿರ್ಮೂಲನ ಮುಂತಾದ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಶ್ರೀಮತಿ ತೇಜಸ್ವಿನಿ ಅವರೊಂದಿಗೆ ವಿವಾಹವಾದ ಶ್ರೀ ಅನಂತಕುಮಾರರಿಗೆ ಕುಮಾರಿ ಐಶ್ವರ್ಯ ಮತ್ತು ಕುಮಾರಿ ವಿಜೇತ ಎಂಬ ಎರಡು ಮಕ್ಕಳು.

ರಾಷ್ರೀಯತೆಯಲ್ಲಿ ನಂಬಿಕೆಯೆಂದರೆ ಸ್ವಸಂಸ್ಕೃತಿಯ ಬಗೆಗಿನ ಗೌರವವೂ ಹೌದು ಎಂಬುದನ್ನು ಪ್ರಕಟಿಸಿದ ಶ್ರೀ ಅನಂತಕುಮಾರರು ವಿಶ್ವ ಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಪ್ರಥಮ ಕನ್ನಡಿಗ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಶ್ರೀ ಅನಂತಕುಮಾರರು ತಮ್ಮ ಅತ್ಯಂತ ಸಹಜ ಮತ್ತು ನೈಜ್ಯ ಕಾರ್ಯದಿಂದಾಗಿ ಮತ್ತು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗೆಗಿನ ಅಗಾಧ ಬದ್ಧತೆಯ ಕಾರಣಕ್ಕಾಗಿ ಕ್ಷೇತ್ರದ ಜನ ಶ್ರೀ ಅನಂತಕುಮಾರರನ್ನು ಪ್ರೀತಿಸುತ್ತಿದ್ದಾರೆ. ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲು ಸತತವಾಗಿ ಶ್ರಮವಹಿಸುತ್ತಿದ್ದಾರೆ. ಲೋಕಸಭೆಯಲ್ಲಿ ಕರ್ನಾಟಕ ಮತ್ತು ಬೆಂಗಳೂರಿನ ಜನಸಾಮಾನ್ಯರ ಏಕೈಕ ದನಿಯಾಗಿ ಶ್ರೀ ಅನಂತಕುಮಾರರು ಹೊರಹೊಮ್ಮಿದ್ದಾರೆ.

“ಭಗವದ್ಗೀತೆಯ ಶ್ಲೋಕವಾದ “ಕರ್ಮಣ್ಯೇವಾಧಿಕಾರಸ್ತೇ ಮಾಫಲೇಶು ಕದಾಚನ, ಮಾ ಕರ್ಮಫಲಹೇತುರ್ಭೂ ಮಾತೆ ಸಂಗೋಶ್ಟ್ವ ಕರ್ಮಣಿ” ಈ ವಿಚಾರದ ಪ್ರತಿಪಾದಕರೂ ಮತ್ತು ಅನುಯಾಯಿಗಳೂ ಆಗಿದ್ದಾರೆ ಶ್ರೀ ಅನಂತಕುಮಾರರು."
       

ಬಾಲ್ಯ

ಅನಂತ್‌ ತಮ್ಮ ಆರಂಭದ ಪಾಠಗಳನ್ನು ತಾಯಿಯ...