image_pdfimage_print

ಒಂದು ನೋಟ:

೧. ಇವರು ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರವಾಗಿ ‘ನಮ್ಮ ಬೆಂಗಳೂರು ಮೆಟ್ರೊ’ ರೈಲು ಸೇವೆ ಯೋಜನೆಗೆ ಚಾಲನೆ ನೀಡಿದರು. ಇದು ದೆಹಲಿ ಮೆಟ್ರೋ ನಂತರ ಕೈಗೆತ್ತಿಕೊಳ್ಳಲಾದ ಯೋಜನೆ. ಇವರು ೨೦೦೩ ರಲ್ಲಿಯೇ ವಾಜಪೇಯಿ ಮ೦ತ್ರಿ ಮ೦ಡಲದಿ೦ದ ಈ ಯೋಜನೆಯನ್ನು ಮಂಜೂರು ಮಾಡಿಸಿಕೊಂಡಿದ್ದರು. ಜೊತೆಗೆ ಇವರು ಬೆಂಗಳೂರು ನಗರಕ್ಕೆ ಉಪನಗರ ರೈಲು ಸಂಚಾರ ವ್ಯವಸ್ಥೆ ಕಲ್ಪಿಸುವ ಪ್ರಸ್ತಾವನೆಯನ್ನೂ ಸರ್ಕಾರದ ಮುಂದಿರಿಸಿರುವರು. ಈ ಎರಡು ಯೋಜನೆಗಳು ಪೂರ್ಣಗೊಂಡರೆ ಬೆಂಗಳೂರಿನಲ್ಲಿ ಸ೦ಚಾರ ಸಮಸ್ಯೆಗಳನ್ನು ಸಾಕಷ್ಟು ತಗ್ಗಿಸಬಹುದು. ಇವರ ಸತತ ಪ್ರಯತ್ನ ಹಾಗೂ ಒತ್ತಾಯಗಳ ಮೇರೆಗೆ ಬೆ೦ಗಳೂರಿನಿ೦ದ ಅಜ್ಮೀರ, ಜೋಧಪುರ. ಇತ್ಯಾದಿ ಸ್ಥಳಗಳಿಗೆ ನೇರ ರೈಲು ಸಂಪರ್ಕಗಳನ್ನು ಕಲ್ಪಿಸಲಾಗಿದೆ.

೨. ರಾಷ್ಟ್ರೀಯ ಮೂಲಸೌಕರ್ಯ ಕಾರ್ಯಪಡೆ ಸದಸ್ಯರಾಗಿದ್ದ ಇವರು ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಯಲ್ಲಿ ಬೆಂಗಳೂರು ಕೂಡ ಸೇರಿಕೊಳ್ಳುವಂತೆ, ಆ ಮೂಲಕ ಬೆಂಗಳೂರನ್ನು ಸುವರ್ಣ ಚತುಷ್ಪಥ ಹೆದ್ದಾರಿ ಜಾಲಕ್ಕೆ ಬೆಸೆಯುವಂತೆ ಕಾಳಜಿ ವಹಿಸಿದರು.

೩. ವಾಜಪೇಯಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಇವರು ಏರೋ ಬ್ರಿಜ್ ಹಾಗೂ ಅಂತಾರಾಷ್ಟ್ರೀಯ ಸಂಪರ್ಕಗಳ ಮೂಲಕ ಎಚ್ಎಎಲ್ ವಿಮಾನ ನಿಲ್ದಾಣದ ಮಟ್ಟವನ್ನು ಎತ್ತರಿಸಿದರು. ಬಹಳ ಬೇಗ ಹಾಳಾಗುವ ಹೂ, ಹಣ್ಣು ಮತ್ತಿತರ ಪದಾರ್ಥಗಳ ಸಾಗಾಣಿಕೆಗಾಗಿ ಇವರು ವಿಶೇಷ ವ್ಯವಸ್ಥೆಯನ್ನು ರೂಪಿಸಿದರು. ಅದರ ಮೂಲಕ ಇಂತಹ ಪದಾರ್ಥಗಳ ರಪ್ತು ವಹಿವಾಟು ಸುಲಭವಾಗುವಂತೆ ಮಾಡಿದರು. ಇವರು ವಿಶ್ವದರ್ಜೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗಾಗಿ ವಿಜ್ಞಾಪನಾ ಪತ್ರಕ್ಕೆ (ಎಮ್ ಒ ಯು) ಸಹಿ ಮಾಡಿದ್ದರು. ಅದೀಗ ನೆರವೇರಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎ೦ಬ ಹೆಸರಿನಲ್ಲಿ ಸಾಕಾರಗೊಂಡಿದೆ.

೪. ಬೆ೦ಗಳೂರಿಗೆ ಕಾವೇರಿ ನದಿಯಿ೦ದ ೨ನೇ, ೩ನೇ ಮತ್ತು ೪ನೇ ಹ೦ತದಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲು ಇವರು ಕಾರಣರಾದರು; ಇದರಿ೦ದ ಆ ಮೊದಲು ಸರಬರಾಜಾಗುತ್ತಿದ್ದ ೯೦೦ ಎಮ್ ಎಲ್ ಡಿ ನೀರಿಗೆ ಹೆಚ್ಚುವರಿಯಾಗಿ ೫೦೦ ಎಮ್ ಎಲ್ ಡಿ ನೀರು ಪೂರೈಕೆ ಸಾಧ್ಯವಾಗಿದೆ. ಇದರ ಜೊತೆಗೆ ತಮ್ಮ ಕ್ಷೇತ್ರದ ಉದ್ದಗಲಕ್ಕೂ ಐನೂರಕ್ಕೂ ಹೆಚ್ಚು ಕಿರು ನೀರು ಸರಬರಾಜು ಯೋಜನೆಗಳಿಗೆ ಚಾಲನೆ ನೀಡಿರುವರು.

೫. ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ (ವಿ ಎ ಎಮ್ ಬಿ ಎ ವೈ) ಅಡಿಯಲ್ಲಿ ನಗರದ ಬಡ ಜನರಿಗಾಗಿ ಮನೆಗಳನ್ನು ಹಾಗೂ ಸಮುದಾಯ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ೧೦೦೦೦ ಮನೆಗಳು ಸೇರಿದಂತೆ ಒಟ್ಟು ಕರ್ನಾಟಕದಲ್ಲಿ ೩೩೦೦೦ ಮನೆಗಳ ನಿರ್ಮಾಣಕ್ಕೆ ಇವರು ಕಾರಣರಾದರು. ಮನೆಗಳನ್ನು ಕುಟು೦ಬದ ಮಹಿಳೆಯ ಹೆಸರಿನಲ್ಲಿ ನೋ೦ದಾಯಿಸುವುದು ಈ ವಿ ಎ ಎಮ್ ಬಿ ಎ ವೈ ಯೋಜನೆಯ ವೈಶಿಷ್ಟ್ಯ.

೬. ೨೦೦೩ ರಿ೦ದ ಬೆಂಗಳೂರಿನ ೭೨೦೦೦ ಕ್ಕಿ೦ತಲೂ ಅಧಿಕ ಮಕ್ಕಳಿಗೆ ಪ್ರತಿ ದಿನ ಪೌಷ್ಟಿಕ ಹಾಗೂ ಆರೋಗ್ಯಕರವಾದ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುತ್ತಿದ್ದಾರೆ. ಈ ಪೌಷ್ಟಿಕ ಆಹಾರ ಯೋಜನೆಯಿ೦ದಾಗಿ ಸಾವಿರಾರು ಮಕ್ಕಳ ಜೀವನದಲ್ಲಿ ಗಮನಾರ್ಹ ಸುಧಾರಣೆಗಳಾಗಿದೆ.

೭. ೨೦೧೨ ರಲ್ಲಿ ವಿಶ್ವ ಸಂಸ್ಥೆಯ ಸಾರ್ವತ್ರಿಕ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇವರು, ಜಾಗತಿಕ ತಾಪಮಾನ, ಇಂಗಾಲದ ದುಷ್ಪರಿಣಾಮಗಳು, ಮಹಿಳಾ ಸಬಲೀಕರಣ, ಸಣ್ಣ ಹಾಗೂ ಹಿಂದುಳಿದ ರಾಷ್ಟ್ರಗಳ ಅವಸ್ಥೆಯೇ ಮೊದಲಾದ ವಿಷಯಗಳ ಬಗ್ಗೆ ಮಾಡಿದ ಭಾಷಣಕ್ಕಾಗಿ ಅಂತಾರಾಷ್ಟ್ರೀಯ ನಾಯಕರ ಪ್ರಶ೦ಸೆಗೆ ಪಾತ್ರರಾದರು. ವಿಶ್ವ ಸಂಸ್ಥೆಯ ಸಾರ್ವತ್ರಿಕ ಸಭೆಯನ್ನು ಕನ್ನಡದಲ್ಲಿ ಸಂಬೋಧಿಸಿದ ಪ್ರಪ್ರಥಮ ವ್ಯಕ್ತಿ ಎ೦ಬ ಹೆಗ್ಗಳಿಕೆಗೂ ಪಾತ್ರರಾದರು.

೮. ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ೧೮ ಆರೋಗ್ಯ ಕೇ೦ದ್ರಗಳಲ್ಲಿ ಭಾರತದಲ್ಲಿಯೇ ಪ್ರಥಮ ಬಾರಿಗೆ ಇ – ಕ್ಷೇಮಾ ಎ೦ಬ ಆರೋಗ್ಯ ತಪಾಸಣಾ ಘಟಕಗಳನ್ನು ಸ್ಥಾಪಿಸಿದರು. ಈ ತಪಾಸಣಾ ಘಟಕಗಳು ಸಾಂಕೇತಿಕ ಮೊತ್ತ ಪಡೆದು ವೈದ್ಯಕೀಯ ತಪಾಸಣೆ ಸೇವೆಯನ್ನು ಒದಗಿಸುತ್ತದೆ. ಉದಾಹರಣೆಗೆ; ರೋಗಿಗಳು ಬಿ ಪಿ ಗೆ ರೂ. ೫, ಈ ಸಿ ಜಿ ಗೆ ರೂ. ೨೫ ಹಾಗೂ ರಕ್ತ ಪರೀಕ್ಷೆಗೆ ಕೇವಲ ೧೦ ರೂ.ಗಳನ್ನು ನೀಡಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ.

೯. ಉಚಿತ ನೇತ್ರ ಪರೀಕ್ಷೆ ಶಿಬಿರಗಳಿಗೆ ಚಾಲನೆ ನೀಡಿದ್ದು, ಈಗಾಗಲೇ ತಮ್ಮ ಕ್ಷೇತ್ರದಲ್ಲಿ ೫೦ ಕ್ಕೂ ಹೆಚ್ಚು ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮವು ೧೭೦೦೦ ಜನರನ್ನು ತಲುಪಿದ್ದು, ೫೬೦೦ ಜನರಿಗೆ ರಿಯಾಯಿತಿ ದರದಲ್ಲಿ ಕನ್ನಡಕಗಳನ್ನು ವಿತರಿಸಲಾಗಿದೆ, ಮತ್ತು ೧೬೦೦ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಕಣ್ಣಿನ ಉಚಿತ ಪರೀಕ್ಷೆ ಹಾಗೂ ಕನ್ನಡಕ ವಿತರಣೆಗಾಗಿ ಸಂಸದರ ಅನುದಾನ ನಿಧಿಯಿ೦ದ ಹವಾನಿಯಂತ್ರಿತ ಬಸ್ಸನ್ನು ಪ್ರಾಯೋಜನೆ ಮಾಡಿದ್ದಾರೆ.

೧೦. ದೆಹಲಿಯಿಂದ ಹೊರಗೆ ಐ ಜಿ ಎನ್ ಸಿ ಎ ಯ ಮೊದಲ ಕೇಂದ್ರವನ್ನು ಬೆ೦ಗಳೂರಿನಲ್ಲಿ ಸ್ಥಾಪಿಸಿದ ಹೆಗ್ಗಳಿಕೆ ಇವರದು.

೧೧. ಬೆಂಗಳೂರಿನಲ್ಲಿ ಮಾಡರ್ನ್ ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಿದ್ದಾರೆ.

೧೨. ಬೆ೦ಗಳೂರಿನ ಸ್ಥಳೀಯ ಹಬ್ಬಗಳಾದ ಕರಗ, ಬಸವನಗುಡಿ ಕಡಲೆಕಾಯಿ ಪರಿಷೆ, ಪುಸ್ತಕ ಪರಿಷೆ, ಮಹಾಶಿವರಾತ್ರಿ, ಸಾರಕ್ಕಿ ಹೂವಿನ ಪಲ್ಲಕ್ಕಿ ಉತ್ಸವ, ದೀಪೋತ್ಸವ, ಗವಿ ಗ೦ಗಾಧರೇಶ್ವರ ಉತ್ಸವಗಳಲ್ಲಿ ಪಾಲ್ಗೊಳ್ಳುವ ಹಾಗೂ ಪ್ರಚಾರಪಡಿಸುವ ಮೂಲಕ ಅವುಗಳ ಜೊತೆ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

೧೩. ಇವರು ಶಾಲಾ ಮಕ್ಕಳಿಗಾಗಿ ಕಡಿಮೆ ಪ್ರೀಮಿಯಂ ಒಳಗೊ೦ಡ ಆರೋಗ್ಯ ಚೇತನ ಕ್ಯಾಶ್ ಲೆಸ್ ಮೆಡಿಕ್ಲೈಮ್ ಗುಂಪು ವಿಮೆ ಸೌಲಭ್ಯವನ್ನು ಪರಿಚಯಿಸಿದ್ದು, ಈ ಯೋಜನೆಯನ್ನು ಡಾ ಕಲಾಂ ಉದ್ಘಾಟಿಸಿದ್ದರು. ಈ ಯೋಜನೆಯು ಸಾವಿರಾರು ಮಕ್ಕಳಿಗೆ ಸಣ್ಣ ಹಾಗೂ ಪ್ರಮುಖ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಸಹಕಾರಿಯಾಗಿದೆ.

೧೪. ಘನತ್ಯಾಜ್ಯ ನಿರ್ವಹಣೆ ಪ್ರಾಧಿಕಾರ ಸ್ಥಾಪನೆಗೆ ವಿವರವಾದ ಮಾರ್ಗಸೂಚಿಗಳನ್ನು ರೂಪಿಸಿದ್ದು, ರಾಜ್ಯ ಬಜೆಟ್ ನಲ್ಲಿ ಇದು ಒಳಗೊಳ್ಳುವಂತೆ ಕಾಳಜಿವಹಿಸಿದ್ದಾರೆ.

೧೫. ಶೂನ್ಯ ತ್ಯಾಜ್ಯ ಸಮುದಾಯ ಅಡುಗೆ ಮನೆಯನ್ನು ನಿರ್ಮಿಸಿದ್ದಾರೆ.

೧೬. ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಗೃಹಿಣಿಯರಿಗೆ ತ್ಯಾಜ್ಯ ನಿರ್ವಹಣೆ ಕುರಿತು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

೧೭. ಶಕ್ತಿಯ ಉಳಿತಾಯ ಮತ್ತು ಶಕ್ತಿಯ ನವೀಕರಣವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ವಿವಿಧ ಸಂಶೋಧನಾ ತಂಡಗಳೊಂದಿಗೆ ಸಹಕರಿಸಿದ್ದಾರೆ.

೧೮. ಬೆಂಗಳೂರಿಗೆಮದೇ ಪ್ರತ್ಯೇಕ ವಿದ್ಯುತ್ ಸ್ಥಾವರ ಪಡೆಯಲು ಪ್ರಯತ್ನ ನಡೆಸುತ್ತಿದ್ದು, ಅದು ಸಧ್ಯದಲ್ಲೇ ಸಾಕಾರಗೊಳ್ಳಲಿದೆ.

೧೯. ಹಾರ್ಟ್ ಅಂಡ್ ಸೋಲ್, ಮನೋನ೦ದನ, ನೆಲೆ, ಮಾನಸಿಕ ಅಸ್ವಸ್ಥರ ವಾಸವಿ ಶಾಲೆ, ಆಪ್ಸ, ನವಚೇತನ ಮು೦ತಾದ ವಿಶೇಷ ಶಾಲೆಗಳಿಗಳಿಗೆ ಬೆಂಬಲವಾಗಿದ್ದಾರೆ.

೨೦. ಸ್ವತಃ ಪುಸ್ತಕಪ್ರೇಮಿಯಾಗಿರುವ ಇವರು, ಕೊಳಚೆ ಪ್ರದೇಶಗಳಲ್ಲಿ ಓದುವ ಕೊಠಡಿಗಳಿಗೆ ಚಾಲನೆ ನೀಡಿದ್ದು, ಪುಸ್ತಕ ಪರಿಷೆಯ ಮೂಲಕ ಸಾವಿರಾರು ಪುಸ್ತಕಗಳನ್ನು ವಿತರಿಸಿರುತ್ತಾರೆ. ಇದಲ್ಲದೇ ಬಹಳಷ್ಟು ಬರಹಗಾರರ ಕೃತಿ ಬಿಡುಗಡೆಗೆ ಅನೇಕ ಬಗೆಯಿಂದ ಸಹಕಾರ ನೀಡಿದ್ದಾರೆ.

೨೧. ಮಕ್ಕಳಿಗೆ ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿ ಒದಗಿಸುವ ಚಿಣ್ಣರ ಚೇತನ ಎ೦ಬ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು, ಈ ಪತ್ರಿಕೆಯು ಸುಮಾರು ೧ ಸಾವಿರ ಶಾಲೆಗಳ ೨ ಲಕ್ಷ ಮಕ್ಕಳನ್ನು ತಲುಪುತ್ತಿದೆ.

೨೨. ತಮ್ಮ ಕ್ಷೇತ್ರದ ಎಲ್ಲಾ ಸರ್ಕಾರಿ ಕನ್ನಡ ಮಾಧ್ಯಮ ಮತ್ತು ಅನುದಾನಿತ ಶಾಲೆಗಳಿಗೆ (೨೦೦ ರಕ್ಕೂ ಹೆಚ್ಚು) ಸಂಸದರ ಅನುದಾನ ನಿಧಿಯ ಮೂಲಕ ಬೆಂಬಲ ಒದಗಿಸುತ್ತಿದ್ದಾರೆ. ಇದು ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳು ಹಾಗೂ ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಕಂಪ್ಯೂಟರ್ ಪೂರೈಕೆಗಳನ್ನು ಒಳಗೊಂಡಿದೆ.

೨೩. ಭಾರತೀಯ ಸಂಸ್ಕೃತಿಯನ್ನು ಸಾರುತ್ತಿರುವ, ಶೈಕ್ಷಣಿಕ – ಸಾಂಸ್ಕೃತಿಕ ಮತ್ತು ಸಮುದಾಯ ಸಂಘಟನೆಗಳಾದ ಗೋಖಲೆ ಸ್ಮಾರಕ, ಉದಯಭಾನು ಕಲಾ ಸ೦ಘ, ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನ, ಇನ್ನೂ ಮು೦ತಾದ ಸ೦ಘಟನೆಗಳಿಗೆ ಸಹಕಾರಿಯಾಗಿದ್ದಾರೆ.

೨೫. ಸಂಸದರ ಅನುದಾನ ನಿಧಿಯಿ೦ದ ಬೆಂಗಳೂರಿನಲ್ಲಿ ಮೊಟ್ಟಮೊದಲ ಮಹಿಳಾ ಜಿಮ್ ಕೇ೦ದ್ರವನ್ನು ಸ್ಥಾಪಿಸಿದ್ದಾರೆ.

೨೫.. ಬೆಂಗಳೂರಿನ ವಿಜಯನಗರದಲ್ಲಿ ರಾಷ್ಟ್ರೀಯ ಗುಣಮಟ್ಟ ಹೊ೦ದಿರುವ ಅಂಬೇಡ್ಕರ್ ಕ್ರೀಡಾ೦ಗಣವನ್ನು ನಿರ್ಮಿಸಿದ್ದಾರೆ.