image_pdfimage_print

ಅಂತರ್ಜಾಲ ಸೆನ್ಸಾರ್ (ದೋಷವಿಮರ್ಶನದ) ವಿರುದ್ಧ ಆರನೇ (೬) ಪ್ರಾಪಂಚಿಕ ದಿನದ ಸ್ಮರಣಾರ್ಥದ ದಿನ ೨೦೦೮ರಲ್ಲಿ ಇದೇ ದಿನ ಗಡಿಯ ತಾರತಮ್ಯವಿಲ್ಲದೆ ಇಡೀ ಪ್ರಪಂಚದ ವರದಿಗಾರರೆಲ್ಲ ಸೇರಿ ಅಂತರ್ಜಾಲ ಸೆನ್ಸಾರ್ ವಿರುದ್ಧ ಪ್ರಥಮ ದಿನ ಆಚರಿಸಿ, ಪ್ರಪಂಚದಾದ್ಯಂತ ಇರುವ ಚಳುವಳಿಗಾರರು, ಸಂಘ ಮತ್ತು ಸಂಸ್ಥೆಗಳಿಗೆ ಅಂತರ್ಜಾಲದ ಮೂಲಕ ಮುಕ್ತವಾಗಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳದೆ ರಕ್ಷಿಸಿಕೊಳ್ಳಬೇಕೆಂಬುದನ್ನು ನೆನೆಪಿಸಿದರು.

ಪ್ರಪಂಚದಾದ್ಯಂತ ಅನೇಕ ಸರಕಾರಗಳು ತಮ್ಮ ದೇಶದ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಎಲ್ಲರಿಗೂ ಸಿಗದಂತೆ ತಡೆಹಾಕಿರುವುದರಿಂದ ಮತ್ತು ಇನ್ನಿತರ ಬೇರೆ ಬೇರೆ ದೇಶಗಳು ಅದಕ್ಕೆ ಬೆಂಬಲನೀಡಿ ಪ್ರೋತ್ಸಾಹಿಸುತ್ತಿರುವುದರಿಂದ ಇಂದು ಮುಕ್ತ ಅಂತರ್ಜಾಲ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಜೊತೆಗೆ ಕೆಲವು ದೇಶದ ಸರಕಾರಗಳು ಅಂತರ್ಜಾಲದ ಮೇಲೆ ಕಾನೂನಿನ ನಿಭಂಧ ಹೇರಿ ಅದನ್ನು ಆಗಾಗ್ಗೆ ಬದಲಾಯಿಸಿ ಅದರ ಮೇಲೆ ನಡೆಸುತ್ತಿರುವುದೂ ಕೂಡ ಎಚ್ಚರಿಕೆಯ ಸೂಚನೆಯಾಗಿದೆ.

ದುರಾದೃಷ್ಟವಶಾತ್, ಕಳೆದ ಐದು ವರ್ಷಗಳಲ್ಲಿ ನಮ್ಮ ದೇಶದ ಸರಕಾರ ಕೂಡ ಮಾಧ್ಯಮಕ್ಕೆ ಅದೇ ರೀತಿ ಸವಾಲುಗಳನ್ನು ಎಸೆದಿದೆಯಲ್ಲದೆ, ಒಬ್ಬ ಕೇಂದ್ರ ಮಂತ್ರಿಗಳು ಅಂತರ್ಜಾಲದಲ್ಲಿ ಏನೋ ವಿಷಯ ಬರುವ ಮುನ್ನ ಅದನ್ನು ಪೂರ್ವ ತಪಾಸಣೆ ನಡೆಸಬೇಕೆಂದು ಕರೆ ಕೊಟ್ಟು ನಮ್ಮ ದೇಶದ ಮಾಧ್ಯಮದ ಸ್ವಾತಂತ್ರ್ಯವನ್ನೇ ಹೊಸಕಿಹಾಕುವ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದರು. ಅಂತರ್ಜಾಲದ ಮೇಲೆ ಈ ರೀತಿಯ ನಿರ್ಬಂಧಗಳು ಮತ್ತು ಸೆನ್ಸಾರ್ ಪ್ರಪಂಚದಾದ್ಯಂತ ಮುಂದುವರೆದಿದ್ದು ಪತ್ರಿಕಾ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುತ್ತಿವೆ. ಅಂತರ್ಜಾಲವು ಪ್ರಪಂಚದಾದ್ಯಂತ ಅಭಿಪ್ರಾಯಗಳನ್ನು ಮತ್ತು ಅನೇಕ ವಿಷಯಗಳನ್ನು ಹಂಚಿಕೊಳ್ಳಲು ಮತ್ತು ಅಭಿವ್ಯಕ್ತಪಡಿಸಲು ಒಂದು ಸಮಂಜಸವಾದ ವೇದಿಕೆಯನ್ನು ಸೃಷ್ಟಿಸಿದೆ. ’ತುರ್ತುಪರಿಸ್ಥಿತಿ’ಯ ಸಮಯದಲ್ಲಿ ಬದುಕಿ ಅದನ್ನು ಹೇರಿದ ಆಗಿನ ಕಾಂಗ್ರೆಸ್ ಸರಕಾರ ಹೇಗೆ ದಬ್ಬಾಳಿಕೆಯಿಂದ ನಮ್ಮೆಲ್ಲರಿಂದ ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿತ್ತೆಂಬುದನ್ನು ಸ್ವತಃ ಅನುಭವಿಸಿರುವ ನಾನು, ಯಾವಾಗಲೂ ಅಂತರ್ಜಾಲವು ಒಂದು ಮುಕ್ತವಾದ, ನಿಷ್ಕಳಂಕ ಹಾಗೂ ಎಲ್ಲರೂ ಸ್ವೀಕರಿಸಬಲ್ಲ ವೇದಿಕೆಯಾಗಬೇಕೆಂದು ಬಯಸುತ್ತೇನೆ. ಅಷ್ಟೇ ಅಲ್ಲದೆ ಅಂತರ್ಜಾಲವನ್ನು ನಿಷ್ಕಳಂಕವಾದ ಹಾಗೂ ದೋಷ ಮುಕ್ತ ವಿಷಯಗಳನ್ನು ಮಾತ್ರ ಪ್ರಕಟಿಸಲು೮ ಬಳಸಬೇಕೇ ಹೊರತು ದ್ರೋಹಕರ ವಿಷಯಗಳನ್ನು ಪ್ರಕಟಿಸಿ ಎತಿ ಹೇಳದೇ ಇರುವುದು ನಮ್ಮೆಲ್ಲರ ಜವಾಬ್ದಾರಿ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಒಟ್ಟಿಗೆ ಪ್ರಯತ್ನಪಟ್ಟರೆ ಅಂತರ್ಜಾಲವನ್ನು ಒಂದು ಅತ್ಯಂತ ಪ್ರೋತ್ಸಾಹಕರ ಹಾಗೂ ಮುಕ್ತವಾಗಿ ಯಾವುದೇ ವಿಷಯವನ್ನು ಅಭಿವ್ಯಕ್ತಪಡಿಸಲು ಒಂದು ವೇದಿಕೆಯನ್ನಾಗಿ ಪರಿವರ್ತಿಸಬಹುದು.