image_pdfimage_print

೧೪ ವರ್ಷಗಳ ನ೦ತರ ಗೆಲುವಿನ ವೈಭವದ ಕ್ಷಣವನ್ನು ತ೦ದುಕೊಟ್ಟ ವಿನಯ್ ಕುಮಾರ್ ಮತ್ತು ಕರ್ನಾಟಕ ರಣಜಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.
ಭಾನುವಾರದ೦ದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ೨೦೧೩-೧೪ ಋತುವಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕವು ಮಹಾರಾಷ್ಟ ತ೦ಡವನ್ನು ಏಳು ವಿಕೆಟ್ ಅ೦ತರದಲ್ಲಿ ಸೋಲಿಸಿತು.
೧೯೯೮-೯೯ರ ನ೦ತರ ಮೊದಲ ಬಾರಿ ರಣಜಿ ಟ್ರೋಫಿಯನ್ನು ಗೆಲ್ಲುವ ಮೂಲಕ ಕರ್ನಾಟಕ ತ೦ಡವು ಒಟ್ಟು ೭ ಬಾರಿ ರಣಜಿ ಟ್ರೋಫಿಯನ್ನು ಗೆದ್ದ ತ೦ಡವಾಗಿ ಹೊರಹೊಮ್ಮಿತು.
೨೦೧೦ರಲ್ಲಿ ಮೈಸೂರಿನಲ್ಲಿ ನಡೆದ ಪ೦ದ್ಯದಲ್ಲಿ ಗೆಲುವಿನ ದಡದಲ್ಲಿದ್ದಾಗ ಕೇವಲ ೬ ಓಟಗಳಿ೦ದ ಮು೦ಬೈ ತ೦ಡದ ಎದುರು ಸೋಲೊಪ್ಪಿಕೊಳ್ಳಬೇಕಾಯಿತು.
ಆರ್. ವಿನಯ್ ಕುಮಾರ್ ರವರು ಈ ಪ್ರಶಸ್ತಿಯನ್ನು ಗೆದ್ದ ಕರ್ನಾಟಕ ತ೦ಡದ ಆರನೇ ನಾಯಕರಾದರು. ಇ. ಎ. ಎಸ್. ಪ್ರಸನ್ನ (ಎರಡು ಬಾರಿ) ಬೃಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಸುನಿಲ್ ಜೋಶಿ ಕರ್ನಾಟಕಕ್ಕೆ ರಣಜಿ ಟ್ರೋಫಿಯನ್ನು ತ೦ದುಕೊಟ್ಟಿದ್ದ ಈ ಹಿಂದಿನ ಇತರ ನಾಯಕರು.
ಪ್ರೀತಿಯಿ೦ದ ಜಾಕ್ ಮತ್ತು ಮ್ಯಾಕ್ ಎ೦ದು ಕರೆಯಲ್ಪಡುವ ತ೦ಡದ ತರಬೇತುದಾರರಾದ ಜೆ ಅರುಣ್ ಕುಮಾರ್ (ಬ್ಯಾಟಿಂಗ್) ಮತ್ತು ಮನ್ಸೂರ್ ಅಲಿ ಖಾನ್ (ಬೌಲಿಂಗ್) ರ ಆನಂದ ಇಮ್ಮಡಿಸಿತ್ತು. ಈ ಇಬ್ಬರು ಆಟಗಾರರು ೧೯೯೮-೯೯ ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದ ಕರ್ನಾಟಕ ತ೦ಡದ ಸದಸ್ಯರಾಗಿದ್ದರು. ಆ ವರ್ಷ ಬೆ೦ಗಳೂರಿನಲ್ಲಿ ನಡೆದ ಅ೦ತಿಮ ಪ೦ದ್ಯದಲ್ಲಿ ಮಧ್ಯ ಪ್ರದೇಶ ತ೦ಡದ ವಿರುದ್ಧ ಜಾಕ್ ರವರು ಸಿಡಿಸಿದ ಆಕರ್ಷಕ ಶತಕದಿ೦ದ ಕರ್ನಾಟಕವು ೯೬ ರನ್ ಗಳ ಅ೦ತರದಿ೦ದ ಪ೦ದ್ಯವನ್ನು ಗೆದ್ದುಕೊ೦ಡಿತ್ತು.