image_pdfimage_print

“ಬೆಂಗಳೂರು ದಕ್ಷಿಣದಿಂದ  ಆಯ್ಕೆಯಾಗಿ ಸಂಸದರಾಗಿರುವ ಶ್ರೀ ಅನಂತಕುಮಾರ್ ರವರು ೧೭ ವರ್ಷಗಳಿ೦ದ ಅದಮ್ಯ ಚೇತನ ಸ೦ಸ್ಥೆಯ ಮುಖ್ಯ ಪೋಷಕರಾಗಿದ್ದು, ಸಾಮಾಜಿಕ ಅಭಿವೃದ್ಧಿಗಾಗಿ ವಿವಿಧ  ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಅದಮ್ಯ ಚೇತನ ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ.  ೧೯೯೮ ರಲ್ಲಿ ನೋಂದಣಿಯಾದ ಈ ಸ೦ಸ್ಥೆಯನ್ನು ಬೆಂಗಳೂರು ದಕ್ಷಿಣ ಸಂಸತ್ ಸದಸ್ಯರಾದ ಶ್ರೀ ಅನಂತಕುಮಾರ್ ರವರ ತಾಯಿ, ಬಡವರ ಹಾಗೂ ಸೌಲಭ್ಯ ವಂಚಿತರ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಶ್ರೀಮತಿ ಗಿರಿಜಾ ಶಾಸ್ತ್ರಿ ಯವರ ಸ್ಮರಣಾರ್ಥವಾಗಿ ಸ್ಥಾಪನೆ ಮಾಡಲಾಯಿತು.  ೧೯೯೮ರಲ್ಲಿ ಬಡ ಹುಡುಗಿಯರಿಗಾಗಿ ಉಚಿತವಾಗಿ ಹೊಲಿಗೆ ತರಬೇತಿ ನೀಡುವ ಮೂಲಕ ಚಿಕ್ಕದಾಗಿ ಆರಂಭವಾದ ಸ೦ಸ್ಥೆ, ೧೯೯೯ರಲ್ಲಿ ಹುಡುಗಿಯರಿಗಾಗಿ ಉಚಿತ ಕ೦ಪ್ಯೂಟರ್ ತರಬೇತಿಯನ್ನು ಹಾಗೂ ೨೦೦೧ ರಲ್ಲಿ ರಕ್ತದಾನ ಹಾಗೂ ರಕ್ತದಾನಿಗಳ ಬಗ್ಗೆ ಮಾಹಿತಿ ನೀಡುವ ವೆಬ್ ಪೋರ್ಟಲ್ ಮತ್ತು ಆಠ – ಪಾಠ ಯೋಜನೆಗಳನ್ನು ಕೈಗೆತ್ತಿಕೊ೦ಡಿತು. ಇಂದು ಅದಮ್ಯ ಚೇತನವು ತನ್ನ ವಿವಿಧ ಯೋಜನೆಗಳಿ೦ದ ಸಾವಿರಾರು ಜೀವಗಳನ್ನು ತಲುಪಿದೆ.

ಅದಮ್ಯ ಚೇತನಕ್ಕೆ ದಾನ ಮಾಡಿ:
ಅದಮ್ಯ ಚೇತನವು ಸಮಾಜೋ-ಆರ್ಥಿಕವಾಗಿ ಹಿದುಳಿದ ಮಕ್ಕಳ ಜೀವನದಲ್ಲಿ ಬದಲಾವಣೆಯನ್ನು ತರುವ ಸದುದ್ದೇಶವನ್ನು ಹೊ೦ದಿದೆ. ನಾವು ಈ ಮಕ್ಕಳಿಗೆ ಅರ್ಥಪೂರ್ಣ ಜೀವನ ನಡೆಸುವ ಅವಕಾಶಗಳನ್ನು ಆರೋಗ್ಯಕರ ರೀತಿಯಲ್ಲಿ ಕಲ್ಪಿಸುವುದರ ಮೂಲಕ ಅವರ ಸರ್ವಾಂಗೀಣ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ. ಈ ಭೂಮಿಯ ಮೇಲೆ ಅವರಿಗೂ ಒಂದು ನೆಲೆಯೊದಗಿಸುವ ಪ್ರಯತ್ನ ನಮ್ಮದು.

ನಿಮ್ಮ ಸಲಹೆ, ನಿಮ್ಮ ಸಮಯ ಮತ್ತು ಹಣಕಾಸಿನ ಸಹಾಯಗಳನ್ನು ಮಾಡುವ ಮೂಲಕ ನೀವು ನಮ್ಮ ಯೋಜನೆಗಳನ್ನು ಬೆ೦ಬಲಿಸಬಹುದಾಗಿದೆ…..
ನಿಮ್ಮ ದೇಣಿಗೆಯನ್ನು ಚೆಕ್ ಮೂಲಕ ನೀಡುವುದಾದರೆ, ದಯವಿಟ್ಟು  ಶ್ರೀಮತಿ ಗಿರಿಜಾ ಶಾಸ್ತ್ರಿ ಮೆಮೊರಿಯಲ್ ಟ್ರಸ್ಟ್ ಹೆಸರಿಗೆ ನೀಡಿ. ಈ ನಿಮ್ಮ ಕೊಡುಗೆಯು ಆದಾಯ ತೆರಿಗೆ ಕಾಯಿದೆಯ ವಿಭಾಗ ೮೦ಜಿ ಯಲ್ಲಿ ತೆರಿಗೆ ವಿನಾಯಿತಿಗೆ ಪರಿಗಣಿಸಲ್ಪಡುತ್ತದೆ. ಅದಮ್ಯ ಚೇತನವು ವಿದೇಶಿ ಕೊಡುಗೆಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ನೋಂದಾವಣೆಗೊಂಡಿದ್ದು, ವಿದೇಶಿ ಹಣವನ್ನು ದೇಣಿಗೆಯಾಗಿ ಪಡೆಯುವ ಪರವಾನಗಿ ಹೊಂದಿದೆ.

…. ಯಾರಾದರೊಬ್ಬರಿಗೆ, ಇದೊ೦ದು ದೊಡ್ಡ ಕೊಡುಗೆಯಾಗಲಿದೆ.
ಬನ್ನಿ… ನಮ್ಮೊ೦ದಿಗೆ ಕೈ ಜೋಡಿಸಿ… ಜಗತ್ತನ್ನು ಜೀವಿಸಲು ಉತ್ತಮ ಸ್ಥಳವಾಗಿಸೋಣ…..

ದಯವಿಟ್ಟು ನಿಮ್ಮ ದೇಣಿಗೆಗಳನ್ನು ಈ ಕೆಳಕ೦ಡ ವಿಳಾಸಕ್ಕೆ ಕಳುಹಿಸಿ.
ಅದಮ್ಯ ಚೇತನ.
ಶ್ರೀಮತಿ. ಗಿರಿಜಾ ಶಾಸ್ತ್ರಿ ಮೆಮೊರಿಯಲ್ ಟ್ರಸ್ಟ್.
ಬಿಬಿಎಂಪಿ ಸಮುದಾಯ ಭವನ , ಗವಿ ಗ೦ಗಾಧರೇಶ್ವರ ದೇವಸ್ಥಾನದ ಹತ್ತಿರ.
ಕೆ.ಜಿ. ನಗರ , ಗವಿಪುರ , ಬೆಂಗಳೂರು – ೫೬೦೦೧೯ ,
ದೂರವಾಣಿ : +೯೧೮೦ ೨೬೬೨೦೪೦೪, +೯೧ ೯೪೪೯೮೬೭೯೫೫
ಇ ಮೇಲ್: donate@adamyachetana.org , tejaswini.acf @ gmail.com”