Think Nation First, Act Nation First, Make Nation First

Home > ಹೇಳಿ ಕೇಳಿ

ಹೇಳಿ ಕೇಳಿ

ಒಟ್ಟು ಪ್ರಶ್ನೆಗಳು : 61

  1. ರಾಜು, ಬನಶಂಕರಿ

    ಐಟಿ, ಬಿಟಿ, ತಂತ್ರಜ್ಞಾನ ಸುಧಾರಣೆಯಾದರೂ ನಮ್ಮ ರೈತರು ತೊಂದರೆ ಪಡ್ತಿದಾರೆ. ಕಾರಣ?

    Ananth Kumar's reply:

    ಇಂಡಿಯಾಗೆ ಐಟಿ, ಭಾರತಕ್ಕೆ ಬಿಟಿ ಬಂದಾಗ ಮಾತ್ರ.

  2. ದೀಪಕ್ ರಾಜು, ಜಯನಗರ

    ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಕಂಪನಿಗಳು ಮುಚ್ತಾ ಇವೆ ? ಯುವಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಏನು ಮಾಡ್ತಾ ಇದೆ ?

    Ananth Kumar's reply:

    ರೇಲು ಇಲ್ಲದ ಬಂಡಿಯಂತೆ ಹಣಕಾಸು ಸಚಿವರಿಲ್ಲದ ಸರ್ಕಾರ ಏನು ಮಾಡಬಹುದು ನೀವೇ ಹೇಳಿ!

  3. ಜೆ. ಆಂಥೋನಿ, ಈಜಿಪುರ

    ಸಾಮಾಜಿಕ ಸಾಮರಸ್ಯ ಶಾಂತಿ ಕಾಪಾಡಲು ಬಿಜೆಪಿ ಯ ಯೋಜನೆ ಏನು ? ತಿಳಿಸಿ.

    Ananth Kumar's reply:

    ಸರ್ವಧರ್ಮ ಸಮಭಾವ ಕೇವಲ ಘೋಷಣೆಯಲ್ಲ, ಆಚರಣೆ.

  4. ಭವರ್‌ಲಾಲ್, ವಿ.ವಿ. ಪುರಂ.

    ದೂರದ ಕಾಶಿ, ಜಮ್ಮು, ಮೊದಲಾದ ತೀರ್ಥಕ್ಷೇತ್ರಗಳಿಗೆ ಬೆಂಗಳೂರಿನಿಂದ ರೈಲು ಪ್ರಾರಂಭವಾಗುವ ನಿರೀಕ್ಷೆ ಹಾಗೆಯೇ ಉಳಿದಿದೆ, ಇದು ಎಂದು ಸಾಕಾರವಾಗುತ್ತದೆ ?

    Ananth Kumar's reply:

    ಕಾಶಿಯಾತ್ರೆಯ ನಂತರವೇ ಅಮರನಾಥನ ದರ್ಶನ ಸಾಧ್ಯ. ಎರಡೂ ಸಆಧ್ಯವಾಗಲು ‘ರಾಮರಥ’ ಯಾತ್ರಿಕರ ಸರ್ಕಾರ ಬರಬೇಕು!

  5. ರಾಜೀವ್ ಪ್ರಕಾಶ, ಬಸವನಗುಡಿ

    ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳು ಸುಧಾರಣೆ ಬಗ್ಗೆ ಬಹಳ ಚರ್ಚೆ ಆಗುತ್ತದೆ. ವಸ್ತುಸ್ಥಿತಿಯಲ್ಲಿ ಬದಲವಣೆ ಹೇಗೆ ಸಾಧ್ಯ ? ನಿಮ್ಮ ಯೋಜನೆ ಏನು ?

    Ananth Kumar's reply:

    ಕಳೆದ ಒಂಬತ್ತು ತಿಂಗಳುಗಳಲ್ಲಿ ಬೆಂಗಳೂರಿನಾದ್ಯಂತ ೧೦೦೦ ಕಾಮಗಾರಿಗಳು ನಡೆದಿವೆ. ಸುಂದರ, ಸ್ವಚ್ಛ, ಸೌಕರ್ಯಭರಿತ ಬೆಂಗಳೂರು ನಮ್ಮ ಗುರಿ.

  6. ಪದ್ಮ ಕೃಷ್ಣಮೂರ್ತಿ, ಪದ್ಮನಾಭನಗರ

    ಮಹಿಳಾ ಮೀಸಲಾತಿ ನಿಜವಾಗಿ ಸಿಗುವದು ಇನ್ನೊ ಯಾವಾಗ ? ಬಿಜೆಪಿ ಏನು ಮಾಡುತ್ತದೆ ?

    Ananth Kumar's reply:

    ದೇಶದ ಮನಸ್ಸು ಹೃದಯ ರೆಡಿಯಾದಾಗ. ಬಿಜೆಪಿ ಇದಕ್ಕಾಗಿ ಪ್ರಯತ್ನ ಮಾಡುತ್ತಿದೆ

  7. ಬ್ರಿಜೇಶ್, ಜೆ. ಪಿ. ನಗರನಾಭನಗರ

    ಬೆಂಗಳೂರಿನಲ್ಲಿ ಈಗ ಅಭಿವೃದ್ಥಿ ಕಾರ್ಯಗಳು ಚೂರು ಶುರುವಾಗಿವೆ, ಆದರೆ ಅಪರಾಧ ಕೃತ್ರಗಳು ಹೆಚ್ಚಾಗಿವೆ. ಇದಕ್ಕೆ ಕಡಿವಾಣ ಯಾವಾಗ ? ನಿವೇನೆಂತೀರಿ.

    Ananth Kumar's reply:

    ನಿರಂತರ ಎಚ್ಚರಿಕೆಯೇ (ಪೊಲೀಸರ) ಅಪರಾಧಕ್ಕೆ ಕಡಿವಾಣ.

  8. ಕೃಷ್ಣಸ್ವಾಮಿ, ಬಿ.ಟಿ.ಎಂ. ಲೇ‌ಔಟ್

    ಬೆಂಗಳೂರು ಪರಿಸರ ಕೆಡುತ್ತಿದೆ, ಟ್ರಾಫಿಕ್ ಸಮಸ್ಯ ಹೆಚ್ಚಾಗಿದೆ. ಇದಕ್ಕೆ ನಿಮ್ಮ ಪರಿಹಾರ-ಉಪಾಯ ಏನಾದ್ರೂ ಇದೆಯೇ ?

    Ananth Kumar's reply:

    ಸ್ವಂತ ಸಾರಿಗೆ ಮಾರಕ, ಸಾರ್ವಜನಿಕ ಸಾರಿಗೆ ತಾರಕ. ಸದ್ಯಕ್ಕೆ ಮೆಟ್ರೋ ಪೂರಕ

  9. ರಾಜೇಗೌಡ, ಬೊಮ್ಮನಹಳ್ಳಿ

    ಬೃಹತ್ ಬೆಂಗಳೂರೋನೊ ಆಯಿತು, ಅಭಿವೃದ್ಥಿ ?

    Ananth Kumar's reply:

    ಅಭಿವೃದ್ಧಿ ಮರೀಚಿಕೆಯಾಗದಿರಲು ಅಬೈಡ್ ಮಾರ್ಗಸೂಚಿಯಿದೆ. ಕಾದುನೋಡಿ

  10. ತ್ಯಾಗರಾಜ, ಬನಶಂಕರಿ

    ನಮ್ಮ ರಾಜ್ಯ ಇಷ್ಟೆಲ್ಲ ಪ್ರಗತಿ ಸಾಧಿಸಿದರೂ ನಮ್ಮ ರಾಜ್ಯಕ್ಕೆ ಇನ್ನೂ ಐ.ಐ.ಟಿ. ಮಂಜೂರಾತಿಗೆ ವಿಳಂಬವೇಕೆ ?

    Ananth Kumar's reply:

    ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ

  11. shwetha

    I am a student n dis vil be my first voting for general elections wat r ur visions to develop or bring economic balance in Karnataka there are other places in Karnataka other than Bangalore crying for development

    Ananth Kumar's reply:

    Oue former Prime Minsiter Vajpayee visualises Development, speedy development, balanced development and comprehensive development for India. I share this vision.

  12. ಹೇಳಿ ಕೇಳಿ : ನಿಮ್ಮ ಪ್ರಶ್ನೆಗಳಿಗೆ ಅನಂತಕುಮಾರ್ ಉತ್ತರ | Ananth Kumar

    [...] ಹೇಳಿ ಕೇಳಿ [...]

  13. anil

    When the Hubli-Dharwad-Bagalkot-Gulbarga will become industrial hub.
    When the agriculture industry will be improved and wll overcome the traditional ‘Tundu Besaya’ .How the issue of reducing ‘Food Security’ will be dealt.

  14. ಶೆಟ್ಟರು

    “ಆಪರೇಶನ್ ಕಮಲ”ದಿಂದಾಗಿ ಈಗಿರುವ ಬಿ.ಜೆ.ಪಿ.ಯಲ್ಲಿ ಬಿ.ಜೆ.ಪಿ.ಯ ಹಳೆಯ ತತ್ವ, ಸಿದ್ಧಾಂತ ಮತ್ತು ಮೂಲವಿಚಾರಗಳಿಗೆ ಬೆಲೆ ಇದೆಯೇ?

  15. Shankar

    IMF proposed that we impose exit tax on IITians leaving the country. It will be fair for the Indian taxpayers who subsidize our education system. Such proposals have come up before but never see the light of the day. I hope you will break this deadlock.

  16. Sushma

    How do you ensure overall development of all the area in south Bangalore? What is the agenda? Please provide specifc inputs. General comments will not increase our confidence.

  17. Deepak H V mullur

    what’s you say one MLA is also contest to Mp elections.

  18. ಸಂಧ್ಯಾ

    ಮಾನ್ಯ ಅನಂತ್ ಕುಮಾರ್ ಅವ್ರೆ,
    ಯೆಡ್ಯೂರಪ್ಪನವರು ಕರ್ನಾಟಕದ ಮೂಖ್ಯಮಂತ್ರಿಗಳಾದ ಮೇಲೆ ಕರ್ನಾಟಕದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ಅದರಲ್ಲಿ ಎರಡು ಮಾತಿಲ್ಲ.
    ನನಗೆ ಭಾರತೀಯ ಜನತಾ ಪಕ್ಷದ ಬಗ್ಗೆ ಬಹಳ ನಂಬಿಕೆ ಉಂಟು.

    ಆದ್ರೆ, ನನಗೆ ಮತ್ತು ಸಾಕಷ್ಟು ಕನ್ನಡಿಗರಿಗೆ ನೋವು ತಂದ ಕೆಲವು ವಿಷಯಗಳನ್ನ ನಿಮಗೆ ತಿಳಿಸ ಬಯಸಿ ಬರೆದಿರುವೆ:
    ೧. ಹಂಪಿ ಉತ್ಸವ:
    ಇದು ಕರ್ನಾಟಕದ ಹೆಮ್ಮೆ. ಈ ಬಾರಿ ನಡೆದ ಹಂಪಿ ಉತ್ಸವ ತುಂಬಾ ನೋವುಂಟು ಮಾಡಿತು. ಕಾರ್ಯಕ್ರಮವನ್ನ ಕನ್ನಡದ ಹಾಡುಗಳಿಂದ ಪ್ರಾರಂಭ ಮಾಡಿರಬೇಕಿತ್ತು. ಹಾಗಿರದೆ, ಆಶಾ ಭೋನ್ಸ್ಲೆ ಯವರು ಹಂಪಿಗೆ ಎಳ್ಳಷ್ಟೂ ಸಂಭಂಧವಿಲ್ಲದ ಯಾವುದೋ ಹಿಂದಿ ಹಾಡಿನೊಂದಿಗೆ ನಮ್ಮ ಕನ್ನಡನಾಡಿನ ಕಾರ್ಯಕ್ರಮವನ್ನ ಪ್ರಾರಂಭ ಮಾಡಿದ್ದರು. ಇದು ಏಕೆ ಹೀಗೆ ನಡೆಯಿತೆಂದು ಇದುವರೆಗೂ ಅರ್ಥವಾಗಿಲ್ಲ. ದಯವಿಟ್ಟು ಕನ್ನಡಿಗರ ಮೇಲೆ ಈ ರೀತಿ ನಡೆಯುತ್ತಿರುವ ಹಿಂದಿ ಹೇರಿಕೆಯನ್ನ ತಡೆಗಟ್ಟಿ.
    ೨. ಜನಪದೋತ್ಸವ:
    ಲಾಲ್ ಬಾಗ್ ನಲ್ಲಿ ನಡೆದ ಜಾನಪದ ಜಾತ್ರೆ ಕೂಡ ಹಿಂದಿ ಹಾಡಿನೊಂದಿಗೆ ಪ್ರಾರಂಭವಾಗಿತ್ತು. ನನ್ನ ಪ್ರಕಾರ, ನಾವು ಕನ್ನಡಿಗರಾಗಿರುವುದರಿಂದ ನಾವು ಭಾರತೀಯರಾಗಿದ್ದೆವೆ. ಹಿಂದಿ ಪ್ರೇಮ ಭಾರತ ಪ್ರೇಮವಲ್ಲ. ಕನ್ನಡದಲ್ಲಿ ನಾಡ ಭಕ್ತಿ ಗೀತೆಗಳಿಲ್ಲವೆ? ದೇಶ ಮೊದಲು ಎಂಬ ನಿಮ್ಮ ವಾದದಂತೆ, ಕರ್ನಾಟಕವಿಲ್ಲದೆ ಭಾರತ ಉಂಟೆ? ಒಂದು ಸುಭದ್ರ ಕರ್ನಾಟಕದಿಂದ, ಒಂದು ಸುಭದ್ರ ಕೇರಳದಿಂದ, ಹಾಗೆ ಸುಭದ್ರವಾದ ಎಲ್ಲಾ ರಾಜ್ಯಗಳಿಂದ ಮಾತ್ರ ಸುಭದ್ರ ಭಾರತವಾಗಲು ಸಾಧ್ಯ ಎಂದು ನನ್ನ ಅನಿಸಿಕೆ. ದಯವಿಟ್ಟು ಕರ್ನಾಟಕಕ್ಕಾಗಿ ನೀವು ಕೆಲಸ ಮಾಡಿ. ಅದರಿಂದಲೇ ಭಾರತಕ್ಕಾಗಿ ಕೆಲಸ ಮಾಡಿದಂತೆ,
    ಭಾರತೀಯ ಜನತಾ ಪಕ್ಷದ ಬಗ್ಗೆ ನಾವೆಲ್ಲ ಇಟ್ಟಿರುವ ನಂಬಿಕೆಯನ್ನ ನೀವು ಉಳಿಸಿಕೊಳ್ಳುವಿರೆಂದು ನಾನು ಭಾವಿಸಿರುವೆ.

  19. Deepak H V mullur

    ¨ÉAUÀ¼ÀÆjUÉ ¤ªÀÄä PÉÆqÀÄUÉ K£ÀÄ?

  20. pavanachar

    ananth kumar avarige jai karnataka belasi kannada ulisi jai bharat mate

  21. Balakrishna(Balu)

    Sir,I am following the updates about Jana chetana Yatra from day one and your contribution to it is great, the sucess of the Yatra is very crutial for the Nation.We too will make Bengaluru function of the yatra sucess inspite of many odds.Go head Ananthji,Advaniji the Nation is with you.

    Ananth Kumar's reply:

    Thanks Balu, How are you? Thank you for making the Banaglore program a great success, SRi Advaniji appreciated the efforts of Karyakartas of Bangalore
    AK-Office

  22. Harsha

    No updates in your Heli-Keli column, Why?

    Ananth Kumar's reply:

    We will start now, start posing questions, I will definetely reply, thanks for the concern.
    AK-Office

  23. ಅನುಸೂಯಾ, ಪದ್ಮನಾಭನಗರ ಬೆಂಗಳೂರು

    ಯಾವುದೇ ರಾಜಕಾರಣಿ ಮೇಲೆ ಆರೋಪ ಬಂದಾಗ ಅವರು ಆತ್ಮಾವಲೋಕನ ಮಾಡಿಕೊಳ್ಳದೇ ಇತರರನ್ನು ದೂಷಿಸುವ ಕೆಲಸ ಮಾಡ್ತಾರಲ್ಲ. ಇದು ಸರಿಯೇ?

    Ananth Kumar's reply:

    ತನ್ನ ತಪ್ಪಿಗೆ, ಸಮರ್ಥನೆ ಇತರರ ತಪ್ಪಿಗೆ ವಿಶ್ಲೇಷಣೆ ಮಾನವ ಸಹಜ ಗುಣ. ರಾಜಕಾರಣಿ ನಿಮ್ಮ ಭೂತಕನ್ನಡಿ.

  24. ರವಿಶಂಕರ್, ಬಸವನಗುಡಿ ಬೆಂಗಳೂರು

    ಪೆಟ್ರೋಲ್, ಡಿಸೆಲ್, ಆಹಾರ ಪದಾರ್ಥ, ಬಡ್ಡಿದರ ಏರುತ್ತಲೇ ಇದೆ. ಡಾಲರ್ ಎದುರು ರೂಪಾಯಿ ದರ ಸಹ ! ಬಹು ಮುಖ ಪ್ರತಿಭೆಯ ನಾಯಕರು ದೇಶವನ್ನು ಎಲ್ಲಿಗೆ ತೆಗೆದುಕೊಂಡು ಹೊರಟಿದ್ದಾರೆ ?

    Ananth Kumar's reply:

    ಶ್ರೀಮಂತರನ್ನು ಸ್ವರ್ಗಕ್ಕೆ, ಜನಸಾಮಾನ್ಯರನ್ನು – ಬಡವರನ್ನು ನರಕಕ್ಕೆ .. . . .

  25. ಅನಿಲಕುಮಾರ್, ಬನಶಂಕರಿ ಬೆಂಗಳೂರು

    ಅದ್ವಾನಿಯವರು, ನೀವು ಜನಚೇತನ ಯಾತ್ರೆ ಮಾಡಿದಿರಿ. ಇಲ್ಲ್ಲಿ ಬಿಬಿಎಂಪಿಯಲ್ಲಿ, ರಾಜ್ಯದಲ್ಲಿ ಹೊಸ ಹಗರಣ, ಆರೋಪ ಬರುತಾ ಇವೆ. ಇದಕ್ಕೆ ಏನು ಮಾಡ್ತಿರಿ ?

    Ananth Kumar's reply:

    ಒಂದೇ ಪರಿಹಾರ ! ನಮ್ಮಿಬ್ಬರ ಯಾತ್ರೆ ನಡೆದೇ ಇದೆ. ಇನ್ನಾದರು ನೀವು ಶುರು ಮಾಡಿ.

  26. Krishnamurthy,ವಿಲ್ಸನ್ ಗಾರ್ಡನ್ ಬೆಂಗಳೂರು

    ಜನಲೋಕಪಾಲ ವಿಧೇಯಕ ಇನ್ನು ಏಕೆ ಜಾರಿಯಾಗುತ್ತಿಲ್ಲ ?ರಾಜಕಾರಣಿಗಳಿಗೆ Accountability ಬಗ್ಗೆ ನಂಬಿಕೆ ಇಲ್ಲವೇ?

    Ananth Kumar's reply:

    ಕಾಂಗ್ರೆಸ್ಸಿನ ರಾಜಕಾರಣಿಗಳಿಗೆ ವಿದೇಶಿ Account ಇದೆ. ಸ್ವದೇಶಿ ability ಇಲ್ಲ.

  27. ಸುಧಾ, ವಿಜಯನಗರ, ಬೆಂಗಳೂರು

    ಇಷ್ಟೂಂದು ಬೆಲೆ ಏರಿಕೆ, ಆಗ್ತಾ ಇದೆ. ಜನರು ಜೀವನ ನಡೆಸುವದು ಕಷ್ಟ ಆಗ್ತಿದೆ. ಜನರ ನೆರವಿಗೆ ಬರುವವರು ಯಾರೂ ಇಲ್ಲ ಅಂತ ಅನ್ನಿಸ್ತಾ ಇದೆ. ಬಿಜೆಪಿ ಏನು ಮಾಡುತ್ತಿದೆ ?

    Ananth Kumar's reply:

    ತಪ್ಪು ಆಯ್ಕೆಗೆ ಭಾರಿ ದಂಡ ತೆರಬೇಕಾಗುತ್ತದೆ. ವಾಜಪೇಯಿ ಅದವಾನಿ ಬದಲು ಸೋನಿಯಾ – ಮನಮೋಹನ ಆಯ್ಕೆ ಬೆಲೆಯ ಬೇಗೆ ನಿಲ್ಲುವದು ಹೇಗೆ ?

  28. ಮುನೇಗೌಡ, ಹನುಮಂತನಗರ, ಬೆಂಗಳೂರು

    ಎಲ್ಲ ರಾಜಕೀಯ ಪಕ್ಷದವರು ಪರಸ್ಪರ ಆರೋಪ ಕೆಸರು ಎರಚುವದನ್ನು ನೋಡಿ ಜನತೆ ಬೇಸತ್ತಿದ್ದಾರೆ. ರಾಜಕೀಯ ಕ್ಷೇತ್ರ ಏನಾದರೂ ಸುಧಾರಣೆ ಕಾಣಬಹುದಾ ? ನಿಮ್ಮ ಯೋಜನೆ ಏನು?

    Ananth Kumar's reply:

    ಹರಟೆಯ ಎಸರು, ಸಾಮಾನ್ಯವಾಗಿ ಕೆಸರೇ ತಾನೆ. . . . ನಿಮ್ಮ ಪ್ರತಿಬಿಂಬ ನಾವು.

  29. ದೀಪಕ್ ಕುಮಾರ್, ಜಯನಗರ, ಬೆಂಗಳೂರು

    ಭಯೋತ್ಪಾದಕ ಕಸಬ್ನ ಮೇಲೆ 16ಕೋಟಿ ರೂಪಾಯಿ ಖಚರ್ಾಗಿದೆ ಎಂದು ವರದಿ ನೋಡಿದೆ. ಏನಿದು ನಮ್ಮ ದೇಶದ ಅವಸ್ಥೆ ?

    Ananth Kumar's reply:

    ಕಾಂಗ್ರೆಸ್ ಸರಕಾರದಲ್ಲಿ ಅಫ್ಘಲ್ ಗುರು, ಕಸಾವ್ ವೋಟ್ನ VVIPಗಳು ಹಾಗೂ ದೇಶ ಮತ್ತು ಅಧಿಕಾರದ ನಡುವೆ, ಅಧಿಕಾರದ ಆಯ್ಕೆಯ ಪರಿಣಾಮ ಇದು.

  30. ಚೇತನ್ಗೌಡ, ಮಂಡ್ಯ

    ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ವಿತಿಮೀರಿ ಬೆಳೆದು ಜನಸಂಖ್ಯೆ, ಟ್ರಾಫಿಕ್, ಕೆರೆಗಳ ಕಣ್ಮರೆಯ ಶಹರವಾಗಿದೆ. ಏನು ಪರಿಹಾರ ?

    Ananth Kumar's reply:

    ಗೌಡ್ರೆ, ಬರೀ ನಮ್ಮ ಬೆಂಗಳೂರಷ್ಟೇ ಅಲ್ಲ, karnataka, ಭಾರತ, ಜಗತ್ತಿನ ಜನಸಂಖ್ಯೆ ಸ್ಪೋಟಗೊಂಡಿದೆ. ಏನು ಪರಿಹಾರ ?

  31. ಸೋಮಶೇಖರ್, ಗೋವಿಂದರಾಜನಗರ, ಬೆಂಗಳೂರು

    ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ದೇಶ ಎಂದು ನಾವು ಹೇಳಿಕೊಳ್ಳುತ್ತೇವೆ. ಆದರೆ, Corporation, ರಾಜ್ಯ, ದೇಶದ ಆಡಳಿತ ನೋಡಿದರೆ ಜನರನ್ನು ದೇವರೆ ಕಾಪಾಡಬೇಕು ಅನಿಸುವದಿಲ್ಲವಾ ?

    Ananth Kumar's reply:

    ಸಧ್ಯಕ್ಕೆ ದೇವರಿಗೂ ಕಷ್ಟ !

  32. ಸುನಿಲಕುಮಾರ್ ನಾಯಕ, ಚಿತ್ರದುರ್ಗ

    ಕೇಂದ್ರದ ಮತೀಯ ಹಿಂಸಾಚಾರ ತಡೆ ಮಸೂದೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ?

    Ananth Kumar's reply:

    ಬ್ರಿಟಿಷರ Divide & Rule ಅಲ್ಲ. ಕಾಂಗ್ರೆಸಿನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ Divide and destroy ತಂತ್ರ ಹೆಣೆದಿದ್ದಾರೆ.

  33. Nagarjuna , ಬೆಂಗಳೂರು

    ಏರುತ್ತಿರುವ ಆಹಾರ ಹಣದುಬ್ಬರದ ಬಗ್ಗೆ ತಮ್ಮ ಅಭಿಪ್ರಾಯ? ವಿರೋಧ ಪಕ್ಷವಾಗಿ ಬಿಜೆಪಿಯ ಹೆಜ್ಜೆ ಏನು ?

    Ananth Kumar's reply:

    ಏರುತ್ತಿರುವ ಬೆಲೆಗಳನ್ನು ಇಳಿಸಲು ಒಂದೇ ಉಪಾಯ ಕಾಂಗ್ರೆಸ್ ಇಳಿಸಿ ಬಿಜೆಪಿ ಗೆಲ್ಲಿಸಿ.

  34. ಸುಜಾತಾ ರಂಗನಾಥ, ಬೆಂಗಳೂರು

    ನಮ್ಮ ಮೆಟ್ರೋ ಬೇಗ ಕಟ್ರೋ ಎಂಬ ಘೋಷಣೆಗೆ ತಾವೇನು ಹೇಳುತ್ತೀರಿ ?

    Ananth Kumar's reply:

    ಇನ್ನೂ ಬೇಗ ಬೇಗ ಕಟ್ರೊ

  35. ಪ್ರದೀಪ ರಾವ್, ತುಮಕೂರು

    ಲೋಕಾಯುಕ್ತ ಸಂಸ್ಥೆಯ ಬಗ್ಗೆ ಹಲವು ಪ್ರಮುಖರು ಸಂದೇಹ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತ ಬೇಕಾ ? ಎನ್ನುವವರೆಗೆ ಪ್ರಶ್ನೆ ಎದ್ದಿದೆ. ನಿಮ್ಮ ಉತ್ತರ ?

    Ananth Kumar's reply:

    ಕಳ್ಳರು ಪೋಲಿಸ್,court ಬೇಡ ಎನ್ನುವದು ಅನುಕೂಲವಾದ.ಇತರರಿಗೆ ಆದರ್ಶವಾದ, ಸ್ವಂತಕ್ಕೆ ಆನುಕೂಲವಾದ ಅಲ್ಲವೇ ರಾವ್ ಅವರೆ.

ನೀವೂ ಕೇಳಿ

Copyright © 2009 www.ananth.org All Rights Reserved. Powered by Dhyeya