image_pdfimage_print

NAMMA METRO FOR A TRAFFIC FREE BANGALORE

  • The Bangalore Metro project, fondly called ‘Namma Metro’ is arguably one of Bangalore’s most ambitious projects.
  • The responsibility of implementing the Bangalore Metro Rail Project lies with the Bangalore Metro Rail Corporation Limited (BMRCL), which is a joint venture of Government of India and Government of Karnataka.
  • Bangalore Metro not only adds to the beauty of Bangalore skyline, but immensely adds to the comfort level of travel.
  • Besides this, Namma Metro is a major environment friendly addition to the Bangalore City as it significantly contributes to the reduction of carbon emissions.

I have fought long and hard for the development of Namma Metro:

  • I was involved in the first detailed project report submitted on the need for various mass transport systems. One of the cities on that list was Bangalore
  • When I was the Union Minister of Urban Development, a policy called the National Urban Transport Policy was formulated where settlements with more than 10 lakh people in them would have metros
  • I suggested the Nada Prabhu Kempegowda International Airport must be connected from all parts of the city by metro. This is also being implemented
  • My suggestion regarding the Third Rail System- a method of providing electric power to a railway train, was also incorporated in Namma Metro

Project details:

  • The project has an East-West corridor – 18.10 km long, starting from Baiyappanahalli in the East and terminating at Mysore Road terminal in the West and a 24.20 km North-South corridor commencing at Nagasandra in the North and terminating at Puttenahalli in the South.
  • This is the First Metro rail project in India commissioned with 750V DC Third Rail on Standard Guage.

ಟ್ರಾಫಿಕ್‌ಮುಕ್ತ ಬೆಂಗಳೂರಿಗಾಗಿ ನಮ್ಮ ಮೆಟ್ರೋ ಯೋಜನೆ

* “ನಮ್ಮ ಮೆಟ್ರೋ” ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿರುವ ಬೆಂಗಳೂರು ಮೆಟ್ರೋ ಯೋಜನೆಯು ಬೆಂಗಳೂರಿನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಬೆಂಗಳೂರು ಮೆಟ್ರೋ ರೈಲ್ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್‌ ಲಿಮಿಟೆಡ್‌ (BMRCL) ವಹಿಸಿಕೊಂಡಿದ್ದು, ಇದು ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರಗಳ ಜಂಟಿ ಸಾಹಸವಾಗಿದೆ.
* ಬೆಂಗಳೂರು ಮೆಟ್ರೋ ಬೆಂಗಳೂರಿನ ಕ್ಷಿತಿಜದ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಓಡಾಟವನ್ನು ಬಹಳಷ್ಟು ಅನುಕೂಲಕರವಾಗಿಸಲಿದೆ. ಇದರ ಹೊರತಾಗಿ, ನಮ್ಮ ಮೆಟ್ರೋ ಬೆಂಗಳೂರು ನಗರಕ್ಕೆ ಪರಿಸರಸ್ನೇಹಿಯಾಗಿಯಾಗಿ ಹೊರಹೊಮ್ಮಲಿದೆ. ಮೆಟ್ರೋ ಆರಂಭದಿಂದಾಗಿ ವಾಹನ ದಟ್ಟಣೆ ಹಾಗೂ ಇಂಗಾಲದ ಉಗುಳುವಿಕೆಯ ಪ್ರಮಾಣ ಇಳಿಕೆಯಾಗಿ, ನಗರದ ಸ್ವಾಸ್ಥ್ಯ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸಹಕಾರಿಯಾಗಲಿದೆ.

ನಮ್ಮ ಮೆಟ್ರೋ ಅಭಿವೃದ್ಧಿಗಾಗಿ ನಾನು ದೀರ್ಘಕಾಲದ ವರೆಗೆ ಪ್ರಬಲ ಹೋರಾಟ ನಡೆಸಿದ್ದೇನೆ:
* ವಿವಿಧ ಬಗೆಯ ಸಮುದಾಯ ಸಾರಿಗೆ ವ್ಯವಸ್ಥೆಗಳ ಅಗತ್ಯದ ಕುರಿತು ಮೊದಲ ಸವಿವರ ಯೋಜನಾ ವರದಿ ಸಲ್ಲಿಸುವಲ್ಲಿ ನಾನು ಭಾಗಿಯಾಗಿದ್ದೆ. ಆ ಪಟ್ಟಿಯಲ್ಲಿ ಬೆಂಗಳೂರು ನಗರವೂ ಸಹ ಒಂದಾಗಿತ್ತು.
* ನಾನು ಕೇಂದ್ರ ನಗರಾಭಿವೃದ್ಧಿ ಸಚಿವನಾಗಿದ್ದಾಗ ರಾಷ್ಟ್ರೀಯ ನಗರ ಸಾರಿಗೆ ನೀತಿಯನ್ನು ರಚನೆಗೊಂಡಿದ್ದು, ಅದರಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನ ವಾಸ್ತವ್ಯವಿರುವ ಪ್ರದೇಶಗಳಲ್ಲಿ ಮೆಟ್ರೋ ಜಾರಿಗೊಳಿಸುವುದೂ ಸೇರಿತ್ತು.
* ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಗರದ ಎಲ್ಲ ಭಾಗಗಳಿಂದಲೂ ಮೆಟ್ರೋ ಸಂಪರ್ಕ ಕಲ್ಪಿಸುವಂತೆ ನಾನು ಸಲಹೆ ನೀಡಿದ್ದೆ. ಅದೀಗ ಅನುಷ್ಠಾನಗೊಳ್ಳುತ್ತದೆ.
* ನಾನು ಸೂಚಿಸಿದ, ರೇಲ್ವೇ ಟ್ರೈನ್‌ಗೆ ವಿದ್ಯುಚ್ಛಕ್ತಿ ಒದಗಿಸುವ ಥರ್ಡ್‌ ರೇಲ್‌ ಸಿಸ್ಟಮ್‌ (ಮೂರನೇ ರೈಲು ವ್ಯವಸ್ಥೆ) ವಿಧಾನವನ್ನು ಕೂಡ ನಮ್ಮ ಮೆಟ್ರೋದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಯೋಜನಾ ವಿವರಗಳು:
ಈ ಯೋಜನೆಯ ೧೮.೧೦ ಕಿ.ಮೀ.ಉದ್ದದ ಪೂರ್ವ – ಪಶ್ಚಿಮ ಕಾರಿಡಾರ್‌, ಪೂರ್ವ ಬೈಯಪ್ಪನ ಹಳ್ಳಿಯಿಂದ ಆರಂಭಗೊಂಡು, ಪಶ್ಚಿಮ ಮೈಸೂರು ರಸ್ತೆ ಟರ್ಮಿನಲ್‌ನಲ್ಲಿ ಕೊನೆಗೊಳ್ಳುತ್ತದೆ. ಹಾಗೂ ೨೪.೨೦ ಕಿ.ಮೀ.ಉದ್ದದ ಉತ್ತರ -ದಕ್ಷಿಣ ಕಾರಿಡಾರ್‌, ಉತ್ತರದ ನಾಗಸಂದ್ರದಲ್ಲಿ ಆರಂಭಗೊಂಡು ದಕ್ಷಿಣದ ಪುಟ್ಟೇನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
ಇದು ಸ್ಟ್ಯಾಂಡರ್ಡ್‌ ಗೇಜ್‌ ಮೇಲೆ ೭೫೦V DC ಥರ್ಡ್‌ ರೈಲ್‌ನೊಂದಿಗೆ ಕಾರ್ಯಾಚರಣೆ ನಡೆಸುವ ಭಾರತದ ಮೊತ್ತಮೊದಲ ಮೆಟ್ರೋ ರೈಲ್‌ ಯೋಜನೆಯಾಗಿದೆ.