image_pdfimage_print

ಅದಮ್ಯ ಚೇತನವು ‘ಅನ್ನಪೂರ್ಣಾ’ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮೂಲಕ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಹಾಗೂ ಜೋಧ್‌ಪುರಗಳ ಸಾವಿರಾರು ಶಾಲೆಗಳ ೨ ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಣಬಡಿಸುತ್ತಿದೆ. ಸರ್ಕಾರ ಹಾಗೂ ದಾನಿಗಳ ದೇಣಿಗೆಯ ಸಹಾಯದಿಂದ, ಸುಸಜ್ಜಿತ ಅಡುಗೆ ಕೋಣೆಗಳಲ್ಲಿ ಪೌಷ್ಟಿಕ ಹಗೂ ಸ್ವಾದಿಷ್ಟ ಆಹಾರವನ್ನು ಸಿದ್ಧಪಡಿಸಲಾಗುತ್ತದೆ. ಅದಮ್ಯ ಚೇತನವು ಇತ್ತೀಚೆಗೆ ತನ್ನ ಅಡುಗೆಮನೆಯನ್ನು ಶೂನ್ಯತ್ಯಾಜ್ಯ ಅಡುಗೆಮನೆಯನ್ನಾಗಿ ರೂಪಿಸಿ ಜನಮೆಚ್ಚುಗೆ ಗಳಿಸಿದೆ. ಪರ್ಯಾಯ ಇಂಧನವನ್ನು ಬಳಸುವ ನಾವು, ಅದಕ್ಕಾಗಿ ತ್ಯಾಜ್ಯಗಳಿಂದ ಉತ್ಪಾದಿಸಿದ ಜೈವಿಕ ಅನಿಲವನ್ನು ಪಳೆಯುಳಿಕೆ ಇಂಧನದ ಬದಲಿಗೆ ಬಳಸುತ್ತೇವೆ ಮತ್ತು ಪ್ರತಿದಿನ ೬೦ ಎಲ್‌ಪಿಜಿ ಸಿಲಿಂಡರ್‌ಗಳು ಅಥವಾ ೩೦೦ ಲೀಟರ‍್ ಡೀಸಲ್‌ನ ಅಗತ್ಯ ಬೀಳುತ್ತದೆ. ಆಹಾರವನ್ನು ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರಗಳಲ್ಲಿ ತುಂಬಿ, ವಿತರಣೆಗಾಗಿಯೇ ವಿನ್ಯಾಸಗೊಳಿಸಲದ ವಿಶೇಷ ವಾಹನಗಳ ಮೂಲಕ ಸಾಗಾಣಿಕೆ ಮಾಡಲಾಗುತ್ತದೆ. ಶಾಲೆಗಳಲ್ಲಿ ಶಿಕ್ಷಕರು ಹಾಗೂ ಸ್ವಯಂಸೇವಕರು ಮಕ್ಕಳಿಗೆ ಬಿಸಿಯೂಟ ಬಡಿಸುತ್ತಾರೆ. ಆಹಾರವು ದಿನದಿಂದ ದಿನಕ್ಕೆ ವಿಭಿನ್ನವಾಗಿದ್ದು, ಅನ್ನ – ಸಾಂಬಾರ‍್, ಮೊಸರನ್ನ, ಪೊಂಗಲ್, ಬಿಸಿಬೇಳೆ ಭಾತ್, ಸಿಹಿ ಪೊಂಗಲ್, ದಾಲ್‌, ರೋಟಿ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಬೇಳೆ, ತರಕಾರಿ, ಬೆಲ್ಲ ಮತ್ತಿತರ ಸಾಮಾಗ್ರಿಗಳ ಬಳಕೆಯು ಆಹಾರದ ಪೌಷ್ಟಿಕತೆಯನ್ನು ಹೆಚ್ಚಿಸುತ್ತದೆ. ಸರ್ಕಾರ, ಸ್ವಯಂಸೇವಕರು, ದಾನಿಗಳು ಹಾಗೂ ಸಂಸ್ಥೆಗಳ ಸಹಕ…