image_pdfimage_print

“ಆಟ ಪಾಠ – ಈ ಪದವೇ ಕಲಿಯುವ ಪ್ರಕ್ರಿಯೆಯನ್ನು ಆನಂದಿಸುವ ಮಕ್ಕಳ ಚಿತ್ರಣ ಕಟ್ಟಿಕೊಡುತ್ತದೆ. ಇದು ೨೦೦೩ರಿಂದಲೂ ಅದಮ್ಯ ಚೇತನದ ವಿಶಿಷ್ಟ ಸಂಚಾರೀ ಸಂಪನ್ಮೂಲವಾಗಿ ಬೆಳೆದುಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ, ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಇದರ ಲಾಭ ದೊರಕುತ್ತಿದೆ. ಈ ಮಕ್ಕಳು ಸಮಾಜದ ಹಿಂದುಳಿದ ವರ್ಗಗಳಿಂದ ಬಂದ, ಆರ್ಥಿಕವಾಗಿ ಕೆಳ ಹಂತದಲ್ಲಿರುವ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಬಾಲ್ಯಸಹಜ ಚಟುವಟಿಕೆಗಳಾದ ಬಣ್ಣಗಳೊಂದಿಗೆ ಆಡುವುದು, ಚಿತ್ರ ಬಿಡಿಸುವುದು, ಪೇಣ –  ಬಣ್ಣದ ಪೆನ್ಸಿಲ್‌ಗಳ ಬಳಕೆ, ಕ್ಲೇ ಮಾಡೆಲಿಂಗ್, ಕಂಪ್ಯೂಟರ್‌ನಲ್ಲಿ ಚಿತ್ರ ಬಿಡಿಸುವುದು – ಇವೆಲ್ಲವೂ ಅವರ ಪಾಲಿಗೆ ದೂರದ ಸಂಗತಿಗಳು. ಆಟ ಪಾಠ ಯೋಜನೆಯು ಈ ಮಕ್ಕಳಿಗೆ ಆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುತ್ತದೆ.

ಆಟ ಪಾಠವು ಬಣ್ಣಬಣ್ಣದ ವ್ಯಾನ್‌ನಲ್ಲಿ ಶಾಲೆಗಳನ್ನು ತಲಪುತ್ತದೆ. ಈ ವ್ಯಾನ್‌ನಲ್ಲಿ ದೃಶ್ಯ -ಶ್ರವಣ ಚಿತ್ರಿಕೆಗಳಿರುವ ಕಂಪ್ಯೂಟರ‍್ ಕೂಡ ಇರುತ್ತದೆ. ಮಕ್ಕಳಿಗೆ ಕೂರಲು ಅನುಕೂಲವಾಗುವಂತಹ ಆರಾಮ ಕುರ್ಚಿಗಳಿರುತ್ತವೆ. ನಮ್ಮ ಕಡೆಯಿಂದ ಇಬ್ಬರು ಶಿಕ್ಷಕರು ವ್ಯಾನ್‌ನಲ್ಲಿರುತ್ತಾರೆ. ಮಕ್ಕಳೊಂದಿಗೆ ಕೆಲಸ ಮಾಡಲು ಇಷ್ಟಪಡುವ ಮಹಿಳೆಯರು ಶಿಕ್ಷಕಿಯರಾಗಿ ತೆರಳುತ್ತಾರೆ. ಮಕ್ಕಳ ಅಸೀಮ ಶಕ್ತ್ಯುತ್ಸಾಹಗಳನ್ನು ನಿಭಾಯಿಸುವ ಸಾಮರ್ಥ್ಯವನ್ನವರು ಹೊಂದಿರುತ್ತಾರೆ.

ಆಟಪಾಠವು ಒಂದರಿಂದ ಏಳನೆ ತರಗತಿವರೆಗಿನ ಮಕ್ಕಳಿಗಾಗಿ ಉದ್ದಿಶ್ಯವಾಗಿದೆ. ಇದು ಸರ್ಕಾರದ ಪಠ್ಯಕ್ಕೆ ಪೂರಕವಾ…”