Think Nation First, Act Nation First, Make Nation First

Home > ಅನಂತಕುಮಾರ್: ಪರಿಚಯ

ಅನಂತಕುಮಾರ್: ಪರಿಚಯ

 
Click HERE to download the profile of AnanthKumar in English.
 

ಸಮಾಜಮಿತ್ರ, ದೇಶಕಾರ್ಯದ ಕಾಯಕಜೀವಿ

ಅನಂತಕುಮಾರ್. ಭಾರತದ ಆಧುನಿಕ ಚಿಂತಕ. ಭಾರತವನ್ನು ಭವ್ಯದೇಶವಾಗಿಸುವ ಹಂಬಲ ಹೊತ್ತ ನಾಯಕ. ಒಡಲೊಳಗೆ ಬದಲಾವಣೆಯ ಅಗ್ನಿಸ್ಫೂರ್ತಿ. ಎಲ್ಲ ಪಂಥಾಹ್ವಾನಗಳನ್ನು ಎದೆಗುಂದದೆ ಎದುರಿಸುವ ಛಾತಿ.

ಇಪ್ಪತ್ತೊಂದು ವರ್ಷಗಳ ರಾಜಕೀಯ ಬದುಕಿನಲ್ಲಿ ಅನಂತಕುಮಾರ್ ಸಮಾಜದ ಸುಖದುಃಖಗಳಲ್ಲಿ ಸಮಭಾಗಿಯಾಗಿದ್ದಾರೆ. ಹತ್ತು ಹಲವು ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ವಿಭಿನ್ನ ರಂಗಗಳಲ್ಲಿ ಕೇಂದ್ರ ಸಚಿವರಾಗಿ ಮಂತ್ರಿಸ್ಥಾನದ ಘನತೆಯನ್ನೂ ಹೆಚ್ಚಿಸಿದ್ದಾರೆ; ವಿಶಿಷ್ಟ ಸಾಧನೆಗಳಿಗೂ ಕಾರಣರಾಗಿದ್ದಾರೆ. ಐವತ್ತು ವರ್ಷಗಳಲ್ಲಿ ಹಿಂದಿನವರು ಮಾಡಲಾಗದ ಬದಲಾವಣೆಗಳನ್ನು ಆರೇ ವರ್ಷಗಳಲ್ಲಿ ತಂದಿದ್ದಾರೆ. ಪ್ರವಾಸೋದ್ಯಮ,ನಾಗರಿಕ ವಿಮಾನಯಾನ, ನಗರಾಭಿವೃದ್ಧಿ, – ಖಾತೆ ಯಾವುದೇ ಇರಲಿ, ಮಂತ್ರ ಅದೇ: ಪ್ರತೀ ಭಾರತೀಯನೂ ಹೆಮ್ಮೆ ಪಡುವಂಥ ಅಭ್ಯುದಯದ ಹೆಜ್ಜೆಗುರುತುಗಳನ್ನು ಅನಂತಕುಮಾರ್ ಮೂಡಿಸಿದ್ದಾರೆ.

ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಅನಂತಕುಮಾರ್ ವಿಶ್ವದ ಭೂಪಟದಲ್ಲಿ ಭಾರತವು ಮಿನುಗುವಂತೆ ಮಾಡಿದರು. ತಾಜಾ ವಿನೂತನ ಚಿಂತನೆಯ ತಂಗಾಳಿ, ಗಟ್ಟಿ ಗೆಲುವಿನ ಕಾರ್ಯತಂತ್ರದ ಬಿರುಸು, – ಹೀಗೆ ಅನಂತಕುಮಾರ್ ಭಾರತದ ಅಸಂಖ್ಯ ಮನೆಮನಗಳಲ್ಲಿ ತನ್ನದೇ ಛಾಪು ಬಿಂಬಿಸಿದ್ದಾರೆ.

ಮೌಲ್ಯಗಳೇ ಅನಂತಕುಮಾರ್ ಕಾಯಕದ ಮೂಲಸೆಲೆ. ಶ್ರೀ ವಾಜಪೇಯಿ, ಶ್ರೀ ಅಡ್ವಾಣಿಜಿಯಂಥ ಮುತ್ಸದ್ದಿಗಳ ಆಶೀರ್ವಾದ, ಪಕ್ಷದ ಕಾರ್ಯಕರ್ತರ, ಹಿತೈಷಿಗಳ ಮತ್ತು ಸ್ನೇಹಿತರ ಬಲಿಷ್ಟ ತಂಡದ ಬೆಂಬಲ, – ಅನಂತಕುಮಾರ್ ವ್ಯಕ್ತಿಯಲ್ಲ, ಸಮಾಜಪ್ರಿಯರ, ಅಭಿವೃದ್ಧಿ ಚಿಂತಕರ ಪ್ರತಿನಿಧಿ. ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂರವರು ಕಾಣುತ್ತಿರುವ ಬಲಿಷ್ಠ ಭಾರತದ ಕನಸನ್ನು ನಿಜಗೊಳಿಸುವ ದಿಟ್ಟ ಯತ್ನದಲ್ಲಿ ಸದಾ ಮಗ್ನರಾದ ಕ್ರಿಯಾಶೀಲ ರಾಜಕಾರಣಿ.

ದಕ್ಷ ಸಂಘಟಕರೆಂದೇ ಪ್ರಸಿದ್ಧರಾದ ಅನಂತಕುಮಾರ್ ಜನತೆಯನ್ನು ರಾಷ್ಟ್ರೀಯ ದೃಷ್ಟಿಕೋನದತ್ತ ಸೆಳೆಯುತ್ತಾರೆ; ಈ ಎಲ್ಲ ಆಶೋತ್ತರಗಳು ನಿಜವಾಗುವುದಕ್ಕಾಗಿ ಶ್ರಮಿಸುತ್ತಾರೆ. ಅವರ ವ್ಯಕ್ತಿತ್ವವೇ ಹಾಗೆ: ನೇರ ವರ್ತನೆ, ನಸುನಗು, ಸಂದರ್ಭಕ್ಕೆ ತಕ್ಕ ನಗೆಚಟಾಕಿ, ಮರುಕ್ಷಣವೇ ದೇಶಕಾರ್ಯದ ಜಾಗೃತಿಯ ಕಿವಿಮಾತು, ಅವರ ರಾಜಕೀಯ ಸ್ಪರ್ಧಿಗಳೂ ಮೆಚ್ಚುವ ನಡೆ,ನುಡಿ.

ಲೋಕನಾಯಕ ಜಯಪ್ರಕಾಶ್ ನಾರಾಯಣರಕರೆಗೆ ಓಗೊಟ್ಟು ಚಳವಳಿಗೆ ಧುಮುಕಿದ ಅನಂತಕುಮಾರ್ ಆಗಷ್ಟೇ ಕಾನೂನು ಪದವೀಧರ. ಅನಂತಕುಮಾರರ ರಚನಾತ್ಮಕ ರಾಜಕೀಯ ಬದುಕು ಮೂರೂವರೆ ದಶಕ ದಾಟಿ ಮುನ್ನಡೆದಿದೆ.

ಹಸನ್ಮುಖಿ ಮತ್ತು ಸ್ನೇಹಭರಿತ ವ್ಯಕ್ತಿತ್ವ

ಅನಂತಕುಮಾರ್ ಮೊದಲು ಒಬ್ಬ ಸಹೃದಯ ಮಿತ್ರರು; ಆಮೇಲೆ ರಾಜಕಾರಣಿ ಎನ್ನುವವರೇ ಹೆಚ್ಚು. ಇದಕ್ಕೆ ಕಾರಣವೂ ಇದೆ. ಸಹ-ರಾಜಕಾರಣಿಗಳು, ಸಮಾಜದ ವಿವಿಧ ಗಣ್ಯರು, ತನ್ನ ವಿದ್ಯಾರ್ಥಿ ಚಳವಳಿಯ ದಿನಗಳ ಮಿತ್ರರು, ದೇಶ ವಿದೇಶದ ಉದ್ಯಮಿಗಳು, ಕುಟುಂಬದ ಸದಸ್ಯರು – ಯಾರೇ ಇರಲಿ, ಅವರನ್ನು ಹಸನ್ಮುಖಿಯಾಗಿ ನೋಡಿಕೊಳ್ಳುವುದು ಅನಂತಕುಮಾರ್‌ರವರ ಸಹಜ ನಡೆ. ಚಹಾಪಾನದ ಜೊತೆ ಮಾತುಕತೆ ನಡೆಸುವುದು ಅನಂತಕುಮಾರ್ ಶೈಲಿ. ಅವರ ದಿನನಿತ್ಯದ ಮಾತುಕತೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಇತಿಹಾಸ ಹಾಸುಹೊಕ್ಕಾಗಿರುತ್ತದೆ. ಸಮಾಜ ಸುಧಾರಕರು, ಹೋರಾಟಗಾರರು, ಮುತ್ಸದ್ದಿಗಳು, ಆಡಳಿತಗಾರರು – [...]

ತುರ್ತುಪರಿಸ್ಥಿತಿಗೆ ವಿರೋಧ: ಸಾಮಾಜಿಕ ಚಟುವಟಿಕೆಯ ಮೊದಲ ಹೆಜ್ಜೆ

ಅವರಿಗಿನ್ನೂ ಹದಿನಾರರ ಹರೆಯ. ತುಂಬಿ ತುಳುಕುತ್ತಿದ್ದ ದಿಟ್ಟತೆ; ಕ್ರಿಯಾಶೀಲತೆ. ಪ್ರಜಾತಂತ್ರದ ನೇಯ್ಗೆಯನ್ನೇ ಛಿದ್ರಗೊಳಿಸುತ್ತಿದ್ದ ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟಿಸಲು ಲೋಕನಾಯಕ ಜಯಪ್ರಕಾಶ ನಾರಾಯಣ್ ಕರೆ ನೀಡಿದ್ದರು. ಇಡೀ ದೇಶದಲ್ಲಿ ಪ್ರತಿಭಟನೆಯ ದಟ್ಟ ಛಾಯೆ. ಜೆಪಿ ಕರೆಗೆ ಓಗೊಟ್ಟ ಪರಿಣಾಮವೇ ಅನಂತಕುಮಾರ್ ಬಂಧನವಾಯಿತು; ಮೂವತ್ತು ದಿನ ಸೆರೆವಾಸ. ಈ ಘಟನೆ ಅವರ ಎದೆಯಾಳದ ದಿಟ್ಟತೆಯನ್ನು ಮತ್ತಷ್ಟು ಗಟ್ಟಿ ಮಾಡಿತು. ರಾಷ್ಟ್ರೀಯ ಪುನರುತ್ಥಾನದ ಗುರಿಯ ಗರಿ ಮತ್ತೆ ಕೆದರಿತು. ವಿದ್ಯಾರ್ಥಿ ಸಮುದಾಯದ ಧ್ವನಿಯಾಗಿ ಅನಂತಕುಮಾರ್ ಶಿಕ್ಷಣ ಸಂಸ್ಥೆಗಳ ಮೊಗಸಾಲೆಯಲ್ಲಿ [...]

ಸಚಿವರಾಗಿ

ನಾಗರಿಕ ವಿಮಾನಯಾನ ಸಚಿವ ನಾಗರಿಕ ವಿಮಾನಯಾನ ಸಚಿವರಾಗಿ ಅನಂತಕುಮಾರ್ ಹಲವು ಉಪಕ್ರಮಗಳನ್ನು ಕೈಗೊಂಡರು; ಪರಿಣಾಮವಾಗಿ ಭಾರತದ ಪ್ರವಾಸೋದ್ಯಮವು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯಿತು. ಜಾಗತಿಕ ವಿಮಾನ ರಂಗದಲ್ಲಿ ಭಾರತವು ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಳಿಸಲೂ ಅನಂತಕುಮಾರ್ ಕ್ರಮಗಳು ನೆರವಾದವು. ಆವರೆಗೆ ನಷ್ಟದಲ್ಲೇ ನಲುಗುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಮತ್ತೆ ಸುಧಾರಿಸಿಕೊಂಡವು; ವಹಿವಾಟು ಹೆಚ್ಚಾಯಿತು; ಅಭೂತಪೂರ್ವ ಎಂಬಂತೆ ದಾಖಲೆಯ ವರಮಾನ ಬಂತು. ಬೆಂಗಳೂರಿಗೆ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕೆಂಬುದು ಕನ್ನಡಿಗರ ಒಂದು ದಶಕಗಳ ಕನಸಾಗಿತ್ತು. [...]

ರಾಜಕಾರಣದಲ್ಲಿ ಮೂಡಿದ ಮುತ್ಸದ್ದಿ

ರಾಜಕೀಯ ಕಾರ್ಯಕರ್ತ ಸಂಘಟಕ ಅನಂತಕುಮಾರ್ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದು ೧೯೮೭ರಲ್ಲಿ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಅನಂತಕುಮಾರ್ ನಂತರ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದರು. ಆಮೇಲೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದರು. ೧೯೮೯ರಿಂದ ೧೯೯೪ರವರೆಗೆ ರಾಜ್ಯದ ಬಿಜೆಪಿಯು ಅನಂತಕುಮಾರ್ ಮತ್ತು ಶ್ರೀ ಬಿ. ಎಸ್. ಯಡ್ಯೂರಪ್ಪನವರ ಸಂಘಟನಾ ಚಾತುರ್ಯದಿಂದ ಬೆಳೆದಿದ್ದು ಈಗ ಇತಿಹಾಸ. ೧೯೮೯ರಲ್ಲಿ ಕೇವಲ ಎರಡೇ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ; ಕೇವಲ ಶೇ. ೨ರಷ್ಟು [...]

ಮನೆ, ಸಂಸ್ಕೃತಿ

೧೯೫೯ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅನಂತಕುಮಾರ್ ಬೆಳೆದದ್ದು ಭಾರತೀಯ ಸಂಸ್ಕೃತಿಯ ಮೌಲ್ಯವನ್ನೇ ಪ್ರತಿಬಿಂಬಿಸುತ್ತಿದ್ದ ಮನೆಯಲ್ಲಿ. ಐವತ್ತರ ದಶಕದಲ್ಲೇ ಮಹಾರಾಣಿ ಕಾಲೇಜಿನಿಂದ ಪದವೀಧರೆಯಾಗಿದ್ದ ತಾಯಿ ಶ್ರೀಮತಿ ಗಿರಿಜಾ ಶಾಸ್ತ್ರಿಯ ವರ ಮಡಿಲಲ್ಲಿ ಅನಂತಕುಮಾರ್ ಮೊದಲ ಪಾಠ ಕಲಿತರು. ಶ್ರೀಮತಿ ಗಿರಿಜಾಶಾಸ್ತ್ರಿಯವರು ಸಮಾಜದ ಅನಿಷ್ಟಗಳ ಬಗ್ಗೆ ಸದಾ ಹೋರಾಡುತ್ತಿದ್ದ ಧೀರ ಚೈತನ್ಯ. ಅವರ ಈ ಎಣೆಯಿಲ್ಲದ ಸಮಾಜಮುಖಿ ಬದುಕಿನ ಬಿಸಿಲಲ್ಲಿ ಅನಂತಕುಮಾರ್ ಹದಿಹರೆಯಕ್ಕೆ ಬಂದರು. ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ತಂದೆ ಶ್ರೀ ನಾರಾಯಣ ಶಾಸ್ತ್ರಿಯವರಂತೂ ಆದರ್ಶದ ಬದುಕಿನ ನಿದರ್ಶನವಾಗಿದ್ದರು. ಸರ್ ಎಂ ವಿಶ್ವೇಶ್ವರಯ್ಯ, [...]

Copyright © 2009 www.ananth.org All Rights Reserved. Powered by Dhyeya