Think Nation First, Act Nation First, Make Nation First

Home > ಅನಂತಕುಮಾರ್: ಪರಿಚಯ > ರಾಜಕಾರಣದಲ್ಲಿ ಮೂಡಿದ ಮುತ್ಸದ್ದಿ

ರಾಜಕಾರಣದಲ್ಲಿ ಮೂಡಿದ ಮುತ್ಸದ್ದಿ


ರಾಜಕೀಯ ಕಾರ್ಯಕರ್ತ ಸಂಘಟಕ

ಅನಂತಕುಮಾರ್ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದು ೧೯೮೭ರಲ್ಲಿ. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಅನಂತಕುಮಾರ್ ನಂತರ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದರು. ಆಮೇಲೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದರು.

೧೯೮೯ರಿಂದ ೧೯೯೪ರವರೆಗೆ ರಾಜ್ಯದ ಬಿಜೆಪಿಯು ಅನಂತಕುಮಾರ್ ಮತ್ತು ಶ್ರೀ ಬಿ. ಎಸ್. ಯಡ್ಯೂರಪ್ಪನವರ ಸಂಘಟನಾ ಚಾತುರ್ಯದಿಂದ ಬೆಳೆದಿದ್ದು ಈಗ ಇತಿಹಾಸ. ೧೯೮೯ರಲ್ಲಿ ಕೇವಲ ಎರಡೇ ವಿಧಾನಸಭಾ ಕ್ಷೇತ್ರಗಳಲ್ಲಿ ಜಯ; ಕೇವಲ ಶೇ. ೨ರಷ್ಟು ಮತಗಳ ಗಳಿಕೆ – ಇದು ಬಿಜೆಪಿಯ ಸಾಧನೆಯಾಗಿತ್ತು. ೧೯೯೪ರಲ್ಲಿ ೩೬ ಕ್ಷೇತ್ರಗಳನ್ನು ಗೆದ್ದ ಬಿಜೆಪಿ ಶೇ. ೨೮ರಷ್ಟು ಮತಗಳನ್ನು ಪಡೆಯಿತು. ಆಮೇಲೆ ಬಿಜೆಪಿ ಹಿಂದಿರುಗಿ ನೋಡಿದ್ದೇ ಇಲ್ಲ. ಈಗ ಶ್ರೀ ಬಿ.ಎಸ್. ಯಡ್ಯೂರಪ್ಪನವರು ದಕ್ಷಿಣ ಭಾರತದ ಪ್ರಪ್ರಥಮ ಬಿಜೆಪಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಿದ್ದಾರೆ.

  • ೧೯೯೫ರಲ್ಲಿ ಅನಂತಕುಮಾರ್ ರಾಷ್ಟ್ರೀಯ ಕಾರ್ಯದರ್ಶಿಯಾದರು.
  • ೧೯೯೬ರ ವರ್ಷ ಅನಂತಕುಮಾರರ ರಾಜಕೀಯ ಬದುಕಿನ ಮಹತ್ವದ ವರ್ಷ. ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅನಂತಕುಮಾರ್ ಬೆಂಗಳೂರಿಗರ ಹೃದಯ ಗೆದ್ದರು; ಕ್ಷೇತ್ರವನ್ನು ಬಹುಮತದಿಂದ ಗೆದ್ದರು.
  • ೧೯೯೮ರಲ್ಲಿ ಮತ್ತೆ ಇದೇ ಲೋಕಸಭಾ ಕ್ಷೇತ್ರದಲ್ಲಿ ೧.೮೦ ಲಕ್ಷ ಮತಗಳ ಅಂತರದಿಂದ ಗೆದ್ದರು. ಬೆಂಗಳೂರಿನ ನಾಗರಿಕರು ಅನಂತಕುಮಾರ್ ಮೇಲಿಟ್ಟ ವಿಶ್ವಾಸಕ್ಕೆ ಇದು ಸಾಕ್ಷಿ.
  • ೧೯೯೮ರಲ್ಲಿ ಅನಂತಕುಮಾರ್‌ರವರು ಶ್ರೀ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಅತ್ಯಂತ ಯುವ ವಯಸ್ಸಿನ ಸಚಿವರಾದರು; ನಾಗರಿಕ ವಿಮಾನಯಾನ ಸೇವೆಯ ಸಚಿವರಾದರು.
  • ಅದಾದ ಮೇಲೆ ಅನಂತಕುಮಾರ್ ಪ್ರವಾಸೋದ್ಯಮ, ಯುವಜನ ಸೇವೆ ಮತ್ತು ಸಂಸ್ಕೃತಿ, ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಸಚಿವರಾಗಿದ್ದ ಪ್ರತಿಯೊಂದು ಖಾತೆಯಲ್ಲಿ ಆಮೂಲಾಗ್ರ ಬದಲಾವಣೆ ತಂದ ಅಗ್ಗಳಿಕೆ ಅನಂತಕುಮಾರರದು. ಪ್ರತಿಯೊಂದು ಇಲಾಖೆಯೂ ದಾಖಲೆ ಪ್ರಮಾಣದಲ್ಲಿ ಪ್ರಗತಿ ಸಾಧಿಸಿತು. ಸಾರ್ವಜನಿಕ ಸೇವೆಯನ್ನು ವ್ಯಾಪಕಗೊಳಿಸಿತು.

ಅನಂತಕುಮಾರ್‌ರವರ ದಕ್ಷ ಆಡಳಿತದ ಮೂರು ಮುಖ್ಯ ಅಂಶಗಳಿವು: ವಿಷಯವನ್ನು ತಕ್ಷಣವೇ ಗ್ರಹಿಸುವ ಸಾಮರ್ಥ್ಯ. ಎಡಬಿಡದೆ ಕಾರ್ಯಜಾರಿ ಯತ್ನ; ಕಠಿಣ ಶ್ರಮ ಮತ್ತು ಜನಪರ ನಿರ್ಣಯಗಳು.

Copyright © 2009 www.ananth.org All Rights Reserved. Powered by Dhyeya Tech