image_pdfimage_print

ಈ ಅಂತರ್ಜಾಲ ತಾಣವು ಜೀವಿತಾವಧಿಯ ವಿಸ್ತರಣೆಗೆ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳುವ ಒಂದು ಅನ್ವಯವಾಗಿದೆ. ಇದು ಜೀವದಾನದ ಅಮೂಲ್ಯ ಉಡುಗೊರೆಯ ಮೂಲಕ ವಿಶ್ವಾದ್ಯಂತ ಸಂಬಂಧ ಬೆಸೆಯುವಲ್ಲಿ ಸಹಕಾರಿಯಾಗಿದೆ. ಈ ಜಾಲ ತಾಣವು ರಕ್ತದ ಅಗತ್ಯ ಇರುವವರನ್ನು ಹಾಗೂ ರಕ್ತ ಮಾಡಲು ಬಯಸುವವರನ್ನು ಒಂದೆಡೆ ಸೇರಿಸುತ್ತದೆ. ಯಾವ ಅಡೆತಡೆಯೂ ಇಲ್ಲದೆಂತೆ ಮನುಕುಲದ ಎಲ್ಲರನ್ನೂ ತಲುಪುವ ವ್ಯವಸ್ಥೆಯನ್ನಿದು ಹೊಂದಿದೆ.
ಇದು ಹೇಗೆ ಕೆಲಸ ಮಾಡುತ್ತದೆ?
ರಕ್ತದಾನಿ – ದಾನಿಯಾಗಿ ನೀವು ನಿಮ್ಮ ವಿವರಗಳನ್ನು ಈ ಜಾಲತಾಣದಲ್ಲಿ ನೋ೦ದಾಯಿಸಿಕೊಳ್ಳಬಹುದು. ನಿಮ್ಮ ವಿವರಗಳನ್ನು ಅತ್ಯ೦ತ ಗೌಪ್ಯವಾಗಿಡಲಾಗುವುದು. ನೀವು ಬಯಸಿದಲ್ಲಿ ಮಾತ್ರ ನಿಮ್ಮ ವಿವರಗಳನ್ನು ನಮ್ಮ ದಾನಿಗಳ ಪಟ್ಟಿಯಲ್ಲಿ ಸೇರಿಸಲಾಗುವುದು.
ರಕ್ತಕ್ಕಾಗಿ ಬೇಡಿಕೆ ಬ೦ದಾಗ, ಬೇಡಿಕೆಯಿರುವ ರಕ್ತದ ಗು೦ಪು ನಿಮ್ಮ ರಕ್ತದ ಗು೦ಪಿನ ಜೊತೆಗೆ ಹೊ೦ದಾಣಿಕೆಯಾದಲ್ಲಿ ನಿಮ್ಮನ್ನು ಸ೦ಪರ್ಕಿಸಲಾಗುವುದು. ರಕ್ತ ವಿನಂತಿದಾರರ ಮತ್ತು ದಾನಿಗಳ ಸ್ಥಳ ಮತ್ತು ರಕ್ತದ ಗು೦ಪನ್ನು ಆಧರಿಸಿ ಬೇಡಿಕೆಯನ್ನು ಪೂರೈಸಲಾಗುವುದು.
ಹೆಚ್ಚಿನ ಮಾಹಿತಿಗೆ ನಮ್ಮ ವೆಬ್ ಸೈಟ್ http://www.raktadan.org/ ಗೆ ಭೇಟಿ ನೀಡಿ .