image_pdfimage_print

“೨೦೧೪ರ ಮೇ ೧೪ರ ಮಧ್ಯಾಹ್ನ ಶ್ರೀ ನರೇಂದ್ರ ಮೋದಿಯವರು ಒಡಿಶಾದ ಸಂಬಾಲ್‌ಪುರದಲ್ಲಿ ‘ವಿಜಯ ಸಂಕಲ್ಪ ಸಮಾವೇಶ’ವನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ಸಿನ ಹುಟ್ಟುಗುಣ ಹಾಗೂ ಸುಳ್ಳು ಭರವಸೆಗಳನ್ನು ಉಗ್ರವಾಗಿ ಟೀಕಿಸಿದ ಶ್ರೀ ಮೋದಿ ಜೀ, ಕಾಂಗ್ರೆಸ್ಸಿನ ಈ ಬಣ್ಣ ಚುನಾವಣೆ  ಅವಧಿಯಲ್ಲಿ ಹೆಚ್ಚು ಎದ್ದು ತೋರುತ್ತದೆಯೆಂದರು. ಹೀಗೆ ನಿಮ್ಮೆಲ್ಲರನ್ನು ವಂಚಿಸುತ್ತಲೇ ಬಂದಿರುವ ಕಾಂಗ್ರೆಸ್ಸನ್ನು ನೀವು ಕ್ಷಮಿಸುವಿರಾ ಎಂದು ಕೇಳಿದ್ದಕ್ಕೆ ಅಲ್ಲಿ ನೆರೆದಿದ್ದ ಗುಂಪು ತಲೆ ಅಲ್ಲಾಡಿಸುವ ಮೂಲಕ ಅಸಮ್ಮತಿ ಸೂಚಿಸಿತು. “”ಜನರಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಾಗಲೀ ಮೋದಿ ಪ್ರಧಾನಮಂತ್ರಿಯಾಗಬೇಕು ಎಂದಾಗಲೀ ಇಲ್ಲ. ಅವರು ರಾಷ್ಟ್ರವನ್ನು ಹಾಳುಗೆಡವಿದ ಜನರಿಗೆ ಸೂಕ್ತ ಪಾಠ ಕಲಿಸಲು ನಿರ್ಧರಿಸಿದ್ದಾರಷ್ಟೆ”” ಎಂದರು ಮೋದಿ ಜೀ.

೨೦೦೯ರ ಚುನಾವಣೆ ಸಮಯದಲ್ಲಿ ತಾವು ಸಂಬಾಲ್‌ಪುರಕ್ಕೆ ಭೇಟಿ ನೀಡಿದ್ದನ್ನು ಶ್ರೀ ಮೋದಿ ಜೀ ನೆನೆಸಿಕೊಂಡರು, ಮತ್ತು ಆ ಅವಧಿಯಲ್ಲಿ ಹೇಗೆ ಕಾಂಗ್ರೆಸ್ ಕೇವಲ ನೂರು ದಿನಗಳಲ್ಲಿ ಹಣದುಬ್ಬರವನ್ನು ಕಡಿಮೆಗೊಳಿಸುವ ವಾಗ್ದಾನ ನೀಡಿತ್ತು ಮತ್ತು ಅದನ್ನು ಇಡೇರಿಸುವಲ್ಲಿ ವಿಫಲವಾಯ್ತು ಎಂಬುದನ್ನವರು ನೆನಪಿಸಿಕೊಟ್ಟರು. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯನ್ನು ಟೀಕಿಸಿದ ಅವರು, ೬೦ ವರ್ಷಗಳಿಂದ ಅಧಿಕಾರದಲ್ಲಿದ್ದರೂ ಈಗ ಇಂಥದೊಂದು ಮಸೂದೆಯನ್ನು ಜಾರಿತರುತ್ತಿರುವ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು.  “”ಕಾಂಗ್ರೆಸ್ ಯಾವತ್ತೂ ಬಡ ಜನರಿಗೆ ಉಪಕಾರಿಯಾಗಿಲ್ಲ….”